Winter Session Day 17 Roundup: ಕಲಾಪದ ಪ್ರಮುಖಾಂಶಗಳು

ನವದೆಹಲಿ,ಡಿಸೆಂಬರ್ 21: ಸಂಸತ್ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಹಲವು ಮಸೂದೆಗಳನ್ನು ಮಂಡನೆ ಮಾಡಲಾಗಿದೆ. ರಾಜ್ಯಸಭೆಯಲ್ಲಿ ಚುನಾವಣಾ ಸುಧಾರಣಾ ಮಸೂದೆಯನ್ನು ಮಂಡಿಸಲಾಗಿದ್ದು, ವಿರೊಧ ಪಕ್ಷ ನಾಯಕರು ಕಲಾಪವನ್ನು ಬಿಟ್ಟು ಹೊರನಡೆದರು.

ಮತದಾರರ ಪಟ್ಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡುವ ಚುನಾವಣಾ ಸುಧಾರಣೆಗಳ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರ ಹೆಸರಿನ ದೃಢೀಕರಣಕ್ಕಾಗಿ ಹಾಗೂ ಹೆಸರಿನ ದೃಢೀಕರಣಕ್ಕಾಗಿ ಮತ್ತು ಹೆಚ್ಚಿನ ಮತ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತದಾರರನ್ನು ಗುರುತಿಸಲೂ ಚುನಾವಣಾ ನೋಂದಣಿ ಅಧಿಕಾರಿಗಳು ಆಧಾರ್ ಸಂಖ್ಯೆ ಪಡೆಯಲಾಗುತ್ತದೆ.

ರಾಜ್ಯಸಭೆಯಲ್ಲಿ ರಿಜಿಜು ಮಧ್ಯಂತರ ಮಸೂದೆಯನ್ನು ಮಂಡಿಸಲಿದ್ದಾರೆ, ಹಾಗೆಯೇ ನಿರ್ಮಲಾ ಸೀತಾರಾಮನ್ ಎನ್‌ಡಿಪಿಎಸ್ ಮಸೂದೆಯನ್ನು ಮಂಡಿಸಲಿದ್ದಾರೆ. ಚುನಾವಣೆ ಪ್ರಕ್ರಿಯೆ ಸಮರ್ಪಕ ಅನುಷ್ಠಾನ, ಮತದಾನ ಹೆಚ್ಚಿಸಲು ಕ್ರಮ, ಚುನಾವಣೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಹಾಗೂ ನಕಲಿ ಮತದಾನ ತಡೆಯುವ ದಿಸೆಯಲ್ಲಿ ಕೇಂದ್ರ ಸರಕಾರ ವಿಧೇಯಕ ಮಂಡಿಸಲಿದೆ.

Parliament Winter Session 2021, Day17Roundup: Key Questions, Bills, Decisions, News and Highlights in Kannada

ಆಧಾರ್‌ ಸಂಖ್ಯೆ-ಪ್ಯಾನ್‌ ಸಂಖ್ಯೆ ಜೋಡಿಸಿದಂತೆ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದು ಹೊಸ ಸುಧಾರಣೆಯಾಗಿದೆ. ಇದರಿಂದ ನಕಲಿ ಮತದಾನ ಹಾಗೂ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದುವುದು ತಪ್ಪುತ್ತದೆ.

ಬಿಜೆಪಿ, ಜೆಡಿಯು, ಎಐಎಡಿಎಂಕೆ, ಬಿಜೆಡಿ, ಟಿಎಂಸಿ-ಎಂ ಸೇರಿದಂತೆ ಹಲವು ಪಕ್ಷಗಳ ಸಮ್ಮತಿಯೊಂದಿಗೆ ಚುನಾವಣಾ ಸುಧಾರಣಾ ಮಸೂದೆಯನ್ನು ಮಂಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+