Get Updates
Get notified of breaking news, exclusive insights, and must-see stories!

ತಬ್ಲಿಘಿ ನಂಟು: 2200 ವಿದೇಶಿಗರಿಗೆ 10 ವರ್ಷ ನಿರ್ಬಂಧ ಹೇರಿದ ಭಾರತ

ದೆಹಲಿ, ಜೂನ್ 4: ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸುಮಾರು 2200 ಜನ ವಿದೇಶಿಗರನ್ನು ಭಾರತ ಸರ್ಕಾರ 10 ವರ್ಷಗಳ ಕಾಲ ನಿಷೇಧ ಹೇರಿದೆ ಎಂದು ಮೂಲಗಳು ತಿಳಿಸಿವೆ.

ವೀಸಾ ಉಲ್ಲಂಘನೆ ಮಾಡಿರುವ ಆರೋಪದಲ್ಲಿ 2200 ಜನ ವೀಸಾ ರದ್ದು ಮಾಡಲಾಗಿತ್ತು. ಕೆಲವರ ವಿರುದ್ಧ ಎಫ್ ಐ ಆರ್ ಸಹ ದಾಖಲಾಗಿತ್ತು. ಇದೀಗ, ಆ 2200 ವಿದೇಶಿಗರನ್ನು ಭಾರತ ಪ್ರವೇಶಕ್ಕೆ 10 ವರ್ಷ ನಿರ್ಬಂಧ ಹಾಕಲಾಗಿದೆ.

ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶಕ್ಕೆ ಆಗಮಿಸಿದ್ದ ತಬ್ಲಿಘಿಗಳಲ್ಲಿ ಅನೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿದೇಶಿಗರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ, ದೇಶಾದ್ಯಂತ ಕೊರೊನಾ ವೈರಸ್ ಹರಡಲು ಕಾರಣವಾಯಿತು ಎಂಬ ಆರೋಪದಡಿ ತಬ್ಲಿಘಿ ಸಮಾವೇಶ ಆಯೋಜಿಸಿದ ಮುಖ್ಯಸ್ಥ ಮೌಲಾನಾ ಸಾದ್ ಸೇರಿದಂತೆ ಅನೇಕರ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

2200 ವಿದೇಶಿಗರ ಪೈಕಿ 379 ಜನ ಇಂಡೋನೇಶಿಯಾ, 110 ಬಾಂಗ್ಲಾದೇಶದವರು, 63 ಮಂದಿ ಮಯನ್ಮಾರ್, 33 ಮಂದಿ ಶ್ರೀಲಂಕಾ, 75 ಮಂದಿ ಮಲೇಶಿಯಾ, ಅಮೆರಿಕ 9, ಚೈನೀಸ್ 6 ಮಂದಿ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಭಾಗವಹಿಸಿದ್ದರು.

960 blacklisted foreign nationals banned for 10 years from India

ಮಾರ್ಚ್ ತಿಂಗಳಲ್ಲಿ ನಡೆದಿದ್ದ ತಬ್ಲಿಘಿ ಸಮಾವೇಶದಲ್ಲಿ 9 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎಂಬ ಮಾಹಿತಿ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+