• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಟಿನ್ ಭಾರತ ಭೇಟಿ ಉದ್ದೇಶವಾದರೂ ಏನು?

By Mahesh
|

ನವದೆಹಲಿ, ಡಿ.8: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಗಮನಕ್ಕೂ ಮುನ್ನ ಡಿ.10ರಂದು ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಅವರು ಭಾರತಕ್ಕೆ ಆಗಮಿಸುವುದು ಖಚಿತ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಎರಡು ದಿನಗಳ ಭಾರತ ಪ್ರವಾಸದ ವೇಳೆ ಹಲವಾರು ಮಹತ್ವದ ಒಪ್ಪಂದಕ್ಕೆ ಪುಟಿನ್ ಹಾಗೂ ಮೋದಿ ಅವರು ಸಹಿ ಹಾಕಲಿದ್ದಾರೆ.

ಡಿಸೆಂಬರ್ 10 ಮತ್ತು 11 ರಂದು ನವದೆಹಲಿಯಲ್ಲಿ ನಡೆಯಲಿರುವ 15ನೇ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಭಾಗವಹಿಸಲಿದ್ದಾರೆ.

ಮಹತ್ವದ ಒಪ್ಪಂದಗಳಿಗೆ ಅಂಕಿತ: ಉಭಯ ದೇಶಗಳ ನಡುವಿನ ಅಣುಶಕ್ತಿ ಸಂಬಂಧಿತ ವಿಚಾರ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಒಪ್ಪಂದಗಳಿಗೆ ಸಹಿ ಬೀಳಲಿದೆ. ವಜ್ರ ಉದ್ಯಮಕ್ಕೆ ಸಂಬಂಧಿತ ಒಪ್ಪಂದಕ್ಕೂ ಸಹಿ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಲಿಯನ್ ಡಾಲರ್ ಜಂಟಿ ಯೋಜನೆ ಐದನೇ ಪೀಳಿಗೆಯ ಯುದ್ಧವಿಮಾನ(FGCA) ಬಳಕೆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. 2010ರಲ್ಲಿ ಬೆಂಗಳೂರಿನ ಎಚ್ಎಎಲ್ ಹಾಗೂ ರಷ್ಯಾದ ಸುಖೋಯಿ ವಿನ್ಯಾಸಗಾರರು ಈ ಜೆಟ್ ವಿಮಾನ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದ್ದರು. ಈ ಬಗ್ಗೆ 2012ರಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಅಂಕಿತ ಬೀಳಬೇಕಿತ್ತು. ಅದರೆ, ಮಾತುಕತೆ ಮುಂದುವರೆಯಲಿಲ್ಲ.

ಈಗ ಸಂಶೋಧನೆ, ಅಭಿವೃದ್ಧಿ, ಬಂಡವಾಳ ಹೂಡಿಕೆಯಲ್ಲಿ ಎರಡು ದೇಶಗಳು ಸಮ ಪಾಲು ಹಂಚಿಕೆಗೆ ಸಿದ್ಧವಾಗಿರುವ ಸೂಚನೆ ಸಿಕ್ಕಿದೆ. ಆದರೆ, ರಕ್ಷಣಾ ಇಲಾಖೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ಜೊತೆಗೆ ಮೋದಿ ಅವರು ಮೇಕ್ ಇನ್ ಇಂಡಿಯಾ ಮಂತ್ರವನ್ನು ಜಪಿಸುತ್ತಿರುವುದರಿಂದ ಸದ್ಯಕ್ಕೆ ಈ ಮಹತ್ವದ ಯೋಜನೆ ಬಗ್ಗೆ ಚರ್ಚೆ ಮಾತ್ರ ನಡೆಸುವ ಸಾಧ್ಯತೆಯಿದೆ.

ಸುಮಾರು 25-30 ಬಿಲಿಯನ್ ಡಾಲರ್ ವೆಚ್ಚದ ಎಫ್ ಜಿಎಫ್ ಎ ಯೋಜನೆ ರಷ್ಯಾದ ವಾಯುಸೇನೆಯ ಸುಖೋಯ್ ಟಿ 50 PAK-FA ಆಧಾರದ ಮೇಲೆ ನಿರ್ಮಿತವಾಗಲಿದೆ. ಉಭಯ ದೇಶಗಳು ಒಪ್ಪಿಗೆ ಸೂಚಿಸಿದರೆ ಮುಂದಿನ ಎಂಟು ವರ್ಷಗಳಲ್ಲಿ ಯೋಜನೆ ಸಾಕಾರಗೊಳ್ಳಲಿದೆ.

ಸಂಸತ್ತಿನಲ್ಲಿ ಭಾಷಣ: ಎರಡು ದಿನಗಳ ಭೇಟಿ ಸಂದರ್ಭದಲ್ಲಿ ಪುಟಿನ್ ಅವರು ಸಂಸತ್ ಕಲಾಪದಲ್ಲಿ ಭಾಗವಹಿಸಿ ವಿಶೇಷ ಭಾಷಣ ಮಾಡಲಿದ್ದಾರೆ. ಈ ಹಿಂದೆ 2010ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸಹಾ ದೇಶದ ಸಂಸತ್ತಿನ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪ್ರಪ್ರಥಮವಾಗಿ ಬ್ರೆಜಿಲ್ಲಿನಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಭಾಗವಹಿಸಿದ್ದ ವೇಳೆ, ಪುಟಿನ್ ಅವರನ್ನು ಭೇಟಿ ಮಾಡಿ ಭಾರತಕ್ಕೆ ಆಹ್ವಾನಿಸಿದ್ದರು. ಮೋದಿ ಅವರ ಆಹ್ವಾನವನ್ನು ಪುಟಿನ್ ಸ್ವೀಕರಿಸಿದ್ದು, ಭಾರತಕ್ಕೆ ಭೇಟಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ನಂತರ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪುಟಿನ್ ಇಬ್ಬರನ್ನೂ ಮೋದಿ ಅವರು ಭೇಟಿ ಮಾಡಿದ್ದರು. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ahead of Russian President Vladimir Putin's visit to India this week, the two countries will hold talks on Tuesday to iron out differences on the much delayed joint multi-billion dollar Fifth Generation Fighter Aircraft (FGFA) project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more