ದೆಹಲಿಯ ಖಾಸಗಿ ಆಸ್ಪತ್ರೆಯ ನರ್ಸ್ ಕೊರೊನಾ ವೈರಸ್‌ನಿಂದ ಸಾವು
ನವದೆಹಲಿ, ಮೇ 25: ಪಶ್ಚಿಮ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ನರ್ಸ್ ಕೊರೊನಾವೈರಸ್‌ಗೆ ಬಲಿಯಾಗಿದ್ದಾರೆ.
ಈಕೆ ಪಶ್ಚಿಮ ದೆಹಲಿಯ ಕೀರ್ತಿನಗರದಲ್ಲಿರುವ ಕಾರ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಆಸ್ಪತ್ರೆಯ ಹೊರಗಿನ ಕ್ಲಿನಿಕ್ ನಲ್ಲಿ ರೋಗಿಗಳನ್ನು ಪರೀಕ್ಷಿಸಲಾಗುತ್ತದೆ ಹಾಗೂ ಜ್ವರವಿಲ್ಲದವರಿಗೆ ಮಾತ್ರ ಆಸ್ಪತ್ರೆ ಪ್ರವೇಶಿಸಲು ಅವಕಾಶವಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನೂ ನರ್ಸ್ ನಿಧನಕ್ಕೆ ಕೇರಳ ನರ್ಸ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.

ಕಳೆದ ಕೆಲ ದಿನಗಳಿಂದ ನರ್ಸ್ ಕೆಲಸಕ್ಕೆ ಹಾಜರಾಗಿರಲಿಲ್ಲ, ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ಆಕೆಯ ಬಗ್ಗೆ ವಿಚಾರಿಸಿದಾಗ ಕೊರೊನಾಗೆ ಬಲಿಯಾಗಿರುವುದು ತಿಳಿದು ಬಂದಿದೆ.












Click it and Unblock the Notifications