ದೆಹಲಿ: ಹೊಸ ಕೊರೊನಾ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣವೇ ಹೆಚ್ಚು
ನವದೆಹಲಿ, ಜುಲೈ 09: ಕೊರೊನಾ ಸೋಂಕಿತ ಪ್ರಕರಣ ಹೆಚ್ಚಿರುವ ದೆಹಲಿಯಿಂದ ಕೊಂಚ ನಿರಾಳರನ್ನಾಗಿಸುವ ಸುದ್ದಿಯೊಂದು ಬಂದಿದೆ.
Recommended Video
ಎಂಟು ದಿನಗಳಲ್ಲಿ ಏಳು ದಿನ ಕೊರೊನಾ ಸೋಂಕಿತ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಪ್ರಮಾಣವೇ ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬುಧವಾರ 2033 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. 3982 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜೂನ್ 23ರಷ್ಟೊತ್ತಿಗೆ ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿತ್ತು ಒಂದೇ ದಿನ ಮೊದಲ ಬಾರಿಗೆ 3947 ಪ್ರಕರಣಗಳು ಪತ್ತೆಯಾಗಿದ್ದವು.

ಬಳಿಕ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿವೆ.ಸೋಮವಾರ 1379 ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ಮೂರು ವಾರಗಳ ಹಿಂದೆ ಒಂದೇ ಬಾರಿಗೆ ಸಾಕಷ್ಟು ಪ್ರಕರಣಗಳು ಪತ್ತೆಯಾಗಿದ್ದವು. ಅವರೆಲ್ಲರೂ ಈಗ ಚೇತರಿಸಿಕೊಂಡು ಮನೆಗಳಿಗೆ ತೆರಳುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ 223,724 ಪಾಸಿಟೀವ್ ಪ್ರಕರಣಗಳಿವೆ. 6,603 ಹೊಸ ಪ್ರಕರಣಗಳು ವರದಿಯಾಗಿವೆ. 123,192 ಗುಣಮುಖರಾಗಿದ್ದಾರೆ. 9,448 ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 104,864 ಪ್ರಕರಣಗಳಿವೆ. 2,033 ಹೊಸ ಪ್ರಕರಣಗಳು, 78,199 ಗುಣಮುಖರಾಗಿದ್ದಾರೆ. 3,213 ಮಂದಿ ಮೃತಪಟ್ಟಿದ್ದಾರೆ.












Click it and Unblock the Notifications