ದೆಹಲಿಯಲ್ಲಿ ಕಾರುಗಳ ಹಿಂಬದಿ ಸೀಟಿನಲ್ಲಿ ಸೀಟ್‌ ಬೆಲ್ಟ್‌ ಧರಿಸದಿದ್ದರೆ 1,000 ರೂ ದಂಡ

ನವದೆಹಲಿ, ಸೆ.14: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರುಗಳ ಹಿಂಬದಿ ಸೀಟಿನಲ್ಲಿ ಸೀಟ್‌ ಬೆಲ್ಟ್‌ ಧರಿಸದಿದ್ದರೆ ದಂಡ ವಿಧಿಸಲಾಗುವುದು. ಹಿಂದಿನ ಸೀಟ್ ಬೆಲ್ಟ್ ಧರಿಸದವರಿಗೆ ₹1,000 ದಂಡ ವಿಧಿಸಲಾಗುವುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ರಸ್ತೆ ಸುರಕ್ಷತೆ ಬಗ್ಗೆ ಮೂರು ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದ ಸರಕಾರ, ಈಗ ದೆಹಲಿಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಹಿಂಬದಿ ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ ಮಿಸ್ತ್ರಿ

ಹಿಂಬದಿ ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ ಮಿಸ್ತ್ರಿ

ದೇಶದ ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಈ ತಿಂಗಳ ಆರಂಭದಲ್ಲಿ ದುರಂತ ಕಾರು ಅಪಘಾತದಲ್ಲಿ ಇತ್ತೀಚೆಗೆ ನಿಧನರಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮಿಸ್ತ್ರಿ ಅವರು ಹಿಂದಿನ ಸೀಟುಗಳಲ್ಲಿ ಕುಳಿತಿದ್ದರು. ಈ ವೇಳೆ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ.

ಮಿಸ್ತ್ರಿ ಸವಾರಿ ಮಾಡುತ್ತಿದ್ದ ಪ್ರೋಗ್ರೆಸ್ಸಿವ್ ಕಾರು (Mercedes Benz GLC 220 D 4 Matic) 7 ಏರ್‌ಬ್ಯಾಗ್‌ಗಳು ಮತ್ತು ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಹೊಸ ತಂತ್ರಜ್ಞಾನವನ್ನು ಹೊಂದಿತ್ತು.

ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ

ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ

ಸೈರಸ್ ಮಿಸ್ತ್ರಿ ಅಪಘಾತದ ನಂತರ, ಹಿಂಬದಿ ಸೀಟಿನಲ್ಲಿ ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಗೆ ದಂಡ ವಿಧಿಸಲು ಕೇಂದ್ರ ನಿರ್ಧರಿಸಿದೆ. ಹಿಂಬದಿ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ಬೀಪರ್ ಅನ್ನು ಸೇರಿಸಲು ಕಾರು ತಯಾರಕರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ.

"ಈಗಾಗಲೇ, ಹಿಂದಿನ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ ಆದರೆ ಜನರು ಅದನ್ನು ಅನುಸರಿಸುತ್ತಿಲ್ಲ. ಹಿಂದಿನ ಸೀಟಿನಲ್ಲಿರುವವರು ಮುಂಭಾಗದ ಸೀಟಿನಲ್ಲಿರುವಂತೆ ಬೆಲ್ಟ್‌ಗಳನ್ನು ಧರಿಸದಿದ್ದರೆ ಸೈರನ್ (ಅಥವಾ ವಾಹನದಲ್ಲಿ ಹೊರಡುವ ಬೀಪರ್) ಇರುತ್ತದೆ. ಅವರು ಬೆಲ್ಟ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸೀಟ್ ಬೆಲ್ಟ್ ಇಲ್ಲದೆ ಏರ್‌ಬ್ಯಾಗ್ ಹಾಕಿದ್ದರೂ, ಅದು ಮಾರಣಾಂತಿಕ

ಸೀಟ್ ಬೆಲ್ಟ್ ಇಲ್ಲದೆ ಏರ್‌ಬ್ಯಾಗ್ ಹಾಕಿದ್ದರೂ, ಅದು ಮಾರಣಾಂತಿಕ

ಜನರು ಅದರಲ್ಲೂ ಹಿಂಬದಿಯ ಪ್ರಯಾಣಿಕರು ವಿದೇಶದಲ್ಲಿ ಇರುವಂತೆ ಸೀಟ್ ಬೆಲ್ಟ್ ಧರಿಸಲು ಶಿಕ್ಷಣ ನೀಡಬೇಕು ಎಂದು ತಜ್ಞರು ಹೇಳಿದ್ದಾರೆ.

"ಅಪಘಾತದ ಸಂದರ್ಭದಲ್ಲಿ, ಪ್ರಯಾಣಿಕರು ತನ್ನ ಸೀಟ್ ಬೆಲ್ಟ್ ಅನ್ನು ಹಾಕದಿದ್ದರೆ, ಅಪಘಾತದಲ್ಲಿ ಪ್ರಯಾಣಿಕ ಸಾಯದಿದ್ದರೂ ಸಹ, ಏರ್‌ಬ್ಯಾಗ್‌ನ ನಿಯೋಜನೆಯು ಪ್ರಯಾಣಿಕರನ್ನು ಬಲಿ ಪಡೆಯಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆರು ಏರ್‌ಬ್ಯಾಗ್‌ಗಳು ಹಿಂದಿನ ಸೀಟಿನ ಪ್ರಯಾಣಿಕರನ್ನು ಸಹ ಆವರಿಸುತ್ತವೆ ಎಂದು ಸೂಚಿಸುತ್ತದೆ" ಇಂಟರ್ನ್ಯಾಷನಲ್ ರೋಡ್ ಫೆಡರೇಶನ್ ಅಧ್ಯಕ್ಷ ಕೆಕೆ ಕಪಿಲಾ ಹೇಳಿದರು.

"ಹಿಂಬದಿ ಸೀಟಿನಲ್ಲಿ ಸೀಟ್ ಬೆಲ್ಟ್‌ಗಳನ್ನು ಹಾಕಿಕೊಳ್ಳುವ ಅಭ್ಯಾಸವು ದೊಡ್ಡ ನಗರಗಳು ಮತ್ತು ಮಹಾನಗರಗಳಲ್ಲಿ ತುಂಬಾ ಕಡಿಮೆಯಾಗಿದೆ. ಇನ್ನು ಭಾರತದ ಸಣ್ಣ ನಗರಗಳಲ್ಲಿ ಇದು ಶೂನ್ಯ . ಇನ್ನೂ ಕೆಟ್ಟದೆಂದರೆ, ಸೀಟ್ ಬೆಲ್ಟ್ ಇಲ್ಲದೆ ಏರ್‌ಬ್ಯಾಗ್ ನಿಯೋಜಿಸಿದರೆ, ಅದು ಹಾನಿಕರ ಅಥವಾ ಮಾರಣಾಂತಿಕವಾಗಬಹುದು ಎಂಬ ಅರಿವು ಭಾರತದಲ್ಲಿ ತುಂಬಾ ಕಡಿಮೆಯಾಗಿದೆ" ಎಂದು ಕೆಕೆ ಕಪಿಲಾ ತಿಳಿಸಿದರು.

2020 ರಲ್ಲಿ ಸೀಟ್ ಬೆಲ್ಟ್ ಧರಿಸದೇ 15 ಸಾವಿರಕ್ಕೂ ಹೆಚ್ಚು ಸಾವು

2020 ರಲ್ಲಿ ಸೀಟ್ ಬೆಲ್ಟ್ ಧರಿಸದೇ 15 ಸಾವಿರಕ್ಕೂ ಹೆಚ್ಚು ಸಾವು

ಕೇಂದ್ರ ಮೋಟಾರು ವಾಹನ ನಿಯಮಗಳ (CMVR) ನಿಯಮ 138 (3) ರ ಅಡಿಯಲ್ಲಿ ಹಿಂಭಾಗದಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೆ ರೂ 1,000 ದಂಡ ಎಂಬುದು ಇದೆ. ಆದರೆ, ಹೆಚ್ಚಿನ ಜನರು ಈ ಕಡ್ಡಾಯ ನಿಯಮದ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ. ಟ್ರಾಫಿಕ್ ಪೊಲೀಸರು ಸಹ ಹಿಂಭಾಗದಲ್ಲಿ ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಗೆ ವಿರಳವಾಗಿ ದಂಡ ವಿಧಿಸುತ್ತಾರೆ.

ಇತ್ತೀಚಿನ ರಸ್ತೆ ಸಚಿವಾಲಯದ ವರದಿಯ ಪ್ರಕಾರ, 2020 ರಲ್ಲಿ ಸೀಟ್ ಬೆಲ್ಟ್ ಧರಿಸದೇ ಸಾವನ್ನಪ್ಪಿದವರ ಸಂಖ್ಯೆ 15,146 ಮತ್ತು ಗಾಯಗೊಂಡವರ ಸಂಖ್ಯೆ 39,102 ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+