ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಚೆಕ್ ಇನ್ ಬ್ಯಾಗೇಜ್ ನಿಮ್ಮ ಕೈ ಕಚ್ಚಲ್ಲ

By Mahesh
|
Google Oneindia Kannada News

ನವದೆಹಲಿ, ಜೂ.28: ಬಜೆಟ್ ವಿಮಾನಯಾನ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಚೆಕ್ ಇನ್ ಬ್ಯಾಗೇಜ್ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ಹಿಂಪಡೆದಿರುವುದಾಗಿ ಹೇಳಿದೆ.

ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮ ಅವರು ಈ ಬಗ್ಗೆ ಮಾಹಿತಿ ನೀಡಿ, ಡಿಜಿಸಿಎ ಸಲ್ಲಿಸಿದ್ದ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದ್ದು, ಕಡಿಮೆ ಬಜೆಟ್ ವಿಮಾನಯಾನದಲ್ಲಿ ಚೆಕ್ ಇನ್ ಬ್ಯಾಗೇಜ್ ಪ್ರಯಾಣಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ. [ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಸಮಸ್ಯೆ ಇನ್ನಿಲ್ಲ!]

No charging for check-in baggage: Govt

ಈ ಮುಂಚೆ ಪ್ರಮುಖ ಏರ್ ಲೈನ್ಸ್ ಸಂಸ್ಥೆಗಳು ಬ್ಯಾಗೇಜ್ ಮೇಲೆ ಶುಲ್ಕ ಏರಿಸಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ) ಇದನ್ನು ಪುರಸ್ಕರಿಸಿದ ಸರ್ಕಾರದ ಒಪ್ಪಿಗೆಗೆ ಸಲ್ಲಿಸಿತ್ತು. ಅದರೆ, ಪ್ರಯಾಣಿಕರ ಮೇಲೆ ಹೊರೆ ಬೀಳದಂತೆ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದೆ. [ಪ್ರವಾಸಿಗರನ್ನು ಸೆಳೆಯಲು ವೀಸಾ ನಿಯಮ ಸರಳ]

ಸ್ಪೈಸ್ ಜೆಟ್, ಇಂಡಿಗೋ ಹಾಗೂ ಏರ್ ಏಷ್ಯಾ ಸಂಸ್ಥೆಗಳು 'ಜೀರೋ ಬ್ಯಾಗೇಜ್ ಫೇರ್' ಶುಲ್ಕರಹಿತ ಆರಾಮದಾಯಕ ಪ್ರಯಾಣಕ್ಕೆ ಒತ್ತು ನೀಡಿರುವುದಾಗಿ ಹೇಳಿಕೊಂಡಿವೆ. ಜೊತೆಗೆ ಟಿಕೆಟ್ ಮೇಲೆ ರಿಯಾಯಿತಿಯನ್ನು ಘೋಷಿಸಿವೆ.

ಸದ್ಯದ ನಿಯಮಗಳ ಪ್ರಕಾರ ಪ್ರಯಾಣಿಕರು 15 ಕೆಜಿಯಷ್ಟು ಲಗೇಜ್ ಯನ್ನು ಉಚಿತವಾಗಿ ಹೊತ್ತೊಯ್ಯಬಹುದಾಗಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಹೊಸ ನಿಯಮ ಜಾರಿಗೊಳಿಸಿದ್ದ ಡಿಜಿಸಿಎ ಸೀಟು ಆಯ್ಕೆ, ಊಟದ ವ್ಯವಸ್ಥೆ, ಲಾಂಜ್ ಮುಂತಾದವುಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುವಂತೆ ಸೂಚಿಸಿತ್ತು. ಒಟ್ಟಾರೆ, ಪ್ರಯಾಣಿಕರಿಗೆ ಹೆಚ್ಚೆಚ್ಚು ಬ್ಯಾಗೇಜ್ ಹೊರುವವರಿಗೆ ಶುಲ್ಕರಹಿತ ಪ್ರಯಾಣ ಸಿಹಿ ಸುದ್ದಿಯಾಗಲಿದೆ. (ಪಿಟಿಐ)

English summary
A move by budget carriers to charge for check-in baggage was today rejected by the government which was not in favour of putting this burden on the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X