ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?

ನವದೆಹಲಿ, ಅಕ್ಟೋಬರ್ 23: ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶ ಹಲವರಲ್ಲಿ ನಿರಾಳತೆ ಮೂಡಿಸಿರಬಹುದು. ಆದರೆ ಈ ಆದೇಶದ ಜೊತೆಗೇ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿದೆ.

ನವೆಂಬರ್ 6 ರಿಂದ 8 ರವರೆಗೆ ಕನಿಷ್ಠ ಮೂರುದಿನಗಳ ಕಾಲ ನಡೆಯಲಿರುವ ದೀಪಾವಳಿಗೂ ಮುನ್ನ ಸುಪ್ರೀಂ ಕೋರ್ಟ್ ನೀಡಿದ ಈ ಆದೇಶ ಪಟಾಕಿ ಪ್ರಿಯರ ಮುಖದಲ್ಲಿ ಮಂದಹಾಸ ಬೀರಿಸಿದೆ. ಪಟಾಕಿಯಿಂದ ಪರಿಸರ ಮಾಲಿನ್ಯವಾಗುತ್ತದೆ ಎಂಬ ಕೂಗು ಹೆಚ್ಚಿರುವ ಹಿನ್ನೆಲೆಯಲ್ಲಿ ಪಟಾಕಿ ಮಾರಾಟದ ಮೇಲೆ ನಿಷೇಧ ಹೇರಲು ಕೋರಲಾಗಿತ್ತು.

ನ್ಯಾ.ಎಕೆ ಸಿಕ್ರಿ ಮತ್ತು ನ್ಯಾ.ಅಶೋಕ್ ಭೂಷಣ್ ಅವರಿದ್ದ ದ್ವೀಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಇಂದು ಮಹತ್ವದ ಆದೇಶ ನೀಡಿದೆ.

ಅಂಗಡಿ, ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದರೂ ಆನ್ ಲೈನ್ ಮೂಲಕ ಪಟಾಕಿ ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಾಲಯ ಖಡಕ್ ಆದೇಶ ನೀಡಿದೆ.

ಅಷ್ಟಕ್ಕೂ ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ವಿಧಿಸಿದ ಷರತ್ತುಗಳು ಯಾವವು?

ಪಟಾಕಿ ಸಿಡಿಸೋಕೆ ನಿರ್ದಿಷ್ಟ ಸಮಯ!

ಪಟಾಕಿ ಸಿಡಿಸೋಕೆ ನಿರ್ದಿಷ್ಟ ಸಮಯ!

ದೀಪಾವಳಿಯ ಸಮಯದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರವೇ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಜೊತೆಗೆ ಕ್ರಿಸ್ ಮಸ್ ಮತ್ತು ಹೊಸ ವರ್ಷಗಳ ಸಮಯದಲ್ಲಿ ರಾತ್ರಿ 11:55 ರಿಂದ 12:30(ರಾತ್ರಿ) ರವರೆಗೆ ಮಾತ್ರವೇ ಪಟಾಕಿ ಸಿಡಿಸಬಹುದು ಎಂದು ಅದು ಹೇಳಿದೆ.

ಹೆಚ್ಚು ಹೊಗೆ ಉಗುಳುವ ಪಟಾಕಿಗೆ ಕಡಿವಾಣ

ಹೆಚ್ಚು ಹೊಗೆ ಉಗುಳುವ ಪಟಾಕಿಗೆ ಕಡಿವಾಣ

ಹೆಚ್ಚು ಹೆಚ್ಚು ಹೊಗೆಯುಗುಳುವ ಪಟಾಕಿಯಿಂದಾಗಿ ವಾಯುಮಾಲಿನ್ಯವಾಗುತ್ತಿದೆ ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಕಡಿಮೆ ಹೊಗೆಯುಗುಳುವ ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ ಹೇಳಿದೆ.

ಹೆಚ್ಚು ಶಬ್ದ ಆಡುವ ಪಟಾಕಿಗೂ ಜಾಗವಿಲ್ಲ!

ಹೆಚ್ಚು ಶಬ್ದ ಆಡುವ ಪಟಾಕಿಗೂ ಜಾಗವಿಲ್ಲ!

ಹೊಗೆಯುಗುಳುವ ಪಟಾಕಿ ಮಾತ್ರವಲ್ಲದೆ, ಹೆಚ್ಚು ಶಬ್ದ ಮಾಡುವ ಪಟಾಕಿಯನ್ನೂ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೆಚ್ಚು ಶಬ್ದ ಮಾಡುವ ಚೈನ್ ಕ್ರಾಕರ್ಸ್ ಮುಂತಾದವುಗಳ ಮೇಲೆ ನಿಷೇಧ ಹೇರಲು ಅದು ಅನುಮತಿ ನೀಡಿದೆ.

ಲೈಸೆನ್ಸ್ ಇಲ್ಲದ ಅಂಗಡೀಲಿ ಕೊಳ್ಳಬೇಡಿ!

ಲೈಸೆನ್ಸ್ ಇಲ್ಲದ ಅಂಗಡೀಲಿ ಕೊಳ್ಳಬೇಡಿ!

ಪಟಾಕಿ ಮಾರಾಟಕ್ಕೆ ಇರುವ ನಿಯಮಗಳನ್ನು ಉಲ್ಲಂಘಿಸದ, ಸುಪ್ರೀಂ ಆದೇಶಗಳನ್ನು ಪಾಲಿಸುವ, ಲೈಸೆನ್ಸ್ ಹೊಂದಿರುವ ವ್ಯಾಪಾರಿಗಳಿಗಷ್ಟೇ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.

ಶಬ್ದಕ್ಕೆ ಮಿತಿ

ಶಬ್ದಕ್ಕೆ ಮಿತಿ

ಜುಲೈ 2005 ತೀರ್ಪಿನಲ್ಲಿ ವಿಧಿಸಿದ ಶಬ್ದಮಾಲಿನ್ಯ ಮಿತಿಯ ನಿಯಮವನ್ನು ಕಡ್ಡಾಯವಾಗಿ ಪಾಲಿಸುವವರು ಮಾತ್ರವೇ ಪಟಾಕಿಯನ್ನು ಮಾರಾಟ ಮಾಡಬಹುದು ಎಂದು ಸುಪ್ರೀಂ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+