ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅತ್ಯುತ್ತಮ ಆಯ್ಕೆ: ಪಿ.ಕೆ.ಸೆಹ್ಗಲ್
ನವದೆಹಲಿ, ಸೆಪ್ಟೆಂಬರ್ 4: ನಿರ್ಮಲಾ ಸೀತಾರಾಮನ್ ಅವರನ್ನು ರಕ್ಷಣಾ ಸಚಿವರನ್ನಾಗಿ ಆಯ್ಕೆ ಮಾಡಿರುವುದು ಕೇಂದ್ರ ಸರ್ಕಾರದ ಅತ್ಯುತ್ತಮ ಆಯ್ಕೆ ಎಂದು ರಕ್ಷಣಾ ತಜ್ಞ ಪಿ.ಕೆ.ಸೆಹ್ಗಾಲ್ ಹೇಳಿದರು.
ಕೇಂದ್ರ ಸಂಪುಟ ವಿಸ್ತರಣೆ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳಿಗಿಗೆ ಪ್ರತಿಕ್ರಿಯೆ ನೀಡಿದ ಅವರು, ನಿರ್ಮಲಾ ಸೀತಾರಾಮನ್ ಅವರು ಬುದ್ಧಿವಂತ, ಶ್ರಮಜೀವಿ. ರಕ್ಷಣಾ ಸಚಿವರ ಹೊಣೆಯನ್ನು ಆವರು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದರು.

ಮೋದಿ ಸರ್ಕಾರದಲ್ಲಿ ಹಂಗಾಮಿ ರಕ್ಷಣಾ ಸಚಿವರಿದ್ದರು, ಆದರೆ ಇದೀಗ ಒಬ್ಬ ಪೂರ್ಣಕಾಲಿಕ ರಕ್ಷಣಾ ಸಚಿವರನ್ನು ನೇಮಿಸಲಾಗಿದ್ದು, ರಕ್ಷಣಾ ಕ್ಷೇತ್ರದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಎಂದರು.
ಸೆಪ್ಟೆಂಬರ್ 3 ರಂದು ಕೇಂದ್ರ ಸಚಿವ ಸಂಪುಟವನ್ನು ವಿಸ್ತರಿಸಿದ ಪ್ರಧಾನಿ ನರೇಂದ್ರ ಮೋದಿ ನಿರ್ಮಲಾ ಸೀತಾರಾಮನ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಿದ್ದಾರೆ.












Click it and Unblock the Notifications