ವಿಡಿಯೋ: ಕಡಲೆಕಾಯಿ ಒಳಗೆ ನೋಟು, ಬಿಸ್ಕೆಟ್ ಪ್ಯಾಕ್ ಒಳಗೆ ನೋಟಿನ ಕಂತೆ!

ನವದೆಹಲಿ, ಫೆಬ್ರವರಿ 13: ಕಡಲೆಕಾಯಿ ಒಳಗೆ ಬೀಜ ಇರುತ್ತದೆ ಅದು ಎಲ್ಲರಿಗೂ ಗೊತ್ತು, ಆದರೆ ಕಡಲೆಕಾಯಿ ಒಳಗೆ ನೋಟು ಎಲ್ಲಾದರೂ ಕಂಡಿದ್ದೀರಾ? ನವದೆಹಲಿಯಲ್ಲಿ ವ್ಯಕ್ತಿಯೊಬ್ಬ ತಂದಿದ್ದ ಕಡಲೆಕಾಯಿ ಒಳಗೆ ನೋಟುಗಳೋ.. ನೋಟುಗಳು!

ಹೌದು, ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಆತನಿಂದ 45 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಇಷ್ಟೂ ಹಣವನ್ನು ಕಡಲೆಕಾಯಿ, ಬಿಸ್ಕೆಟ್ ಪ್ಯಾಕ್, ಬೇಯಿಸಿದ ಮಾಂಸದ ತುಂಡಿನಲ್ಲಿ ಇಟ್ಟುಕೊಂಡು ಬಂದಿದ್ದ.

ದುಬೈ ವೀಸಾ ಹೊಂದಿದ್ದ ಮುರಾದ್ ಅಲಮ್ ಎಂಬಾತ ಸೌದಿ ರಿಯಾಲ್, ಕತಾರಿ ರಿಯಾಲ್, ಕುವೈತ್ ದಿನಾರ್, ಒಮಾನಿ ರಿಯಾಲ್ ಕರೆನ್ಸಿ ನೋಟುಗಳನ್ನು ಕಡಲೆಕಾಯಿ, ಬಿಸ್ಕೆಟ್ ಪ್ಯಾಕೆಟ್ ಒಳಗೆ ಮತ್ತು ನೋಟುಗಳನ್ನು ಪ್ಲಾಸ್ಟಿಕ್ ಕವರ್ ಒಳಗೆ ಇಟ್ಟು ಅದನ್ನು ಮಾಂಸದ ಉಂಡೆಯೊಳಗೆ ತುರಿಕಿ ಬೇಯಿಸಿ ಒಗ್ಗರಣೆ ಸಹ ಹಾಕಿಕೊಂಡು ವಿಮಾನ ನಿಲ್ದಾಣಕ್ಕೆ ತಂದಿದ್ದ.

New Delhi: Foreign Currency in Peanut, Meatballs And Biscuits

ಆತ ತಂದ ಲಗೇಜಿನಲ್ಲಿ ಬರೀಯ ಕುರುಕುಲು ತಿಂಡಿಗಳೇ ಇದ್ದಿದ್ದನ್ನು ನೋಡಿದ ಸಿಐಎಸ್‌ಎಫ್ ಸಿಬ್ಬಂದಿ ಅನುಮಾನಗೊಂಡು ಅವುಗಳನ್ನು ತೆರೆದು ನೋಡಿದಾಗ ನಿಜಾಂಶ ಗೊತ್ತಾಗಿದೆ.

ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ್ದ ಮುರಾದ್ ಅಲಮ್, ಒಂದೊಂದು ಕಡಲೆಕಾಯಿ ಒಳಗೂ ಒಂದೊಂದು ನೋಟುಗಳನ್ನು ಇಟ್ಟು ಗಮ್ ಹಾಕಿ ಅಂಟಿಸಿದ್ದ. ಬಿಡಿಸಿನೋಡುವವರೆಗೂ ಅದೊರಳಗೆ ಹಣ ಇರುವುದು ಗೊತ್ತೆ ಆಗುತ್ತಿರಲಿಲ್ಲ. ದುಂಡನೆಯ ಮಾರಿ ಬಿಸ್ಕೆಟ್ ಗಳನ್ನು ಸರಿಯಾಗಿ ಮಧ್ಯದಲ್ಲಿ ತೂತು ಮಾಡಿ ಅದರೊಳಗೆ ನೋಟಿನ ಕಂತೆಯನ್ನು ದುಂಡಗೆ ಸುತ್ತಿ ಇಟ್ಟಿದ್ದ.

New Delhi: Foreign Currency in Peanut, Meatballs And Biscuits

ಸಿಐಎಸ್‌ಎಫ್ ಸಿಬ್ಬಂದಿ ತಿಂಡಿಗಳಿಂದ ಹಣವನ್ನು ಹೊರಗೆ ತೆಗೆಯುತ್ತಿರುವ ವಿಡಿಯೋವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+