ಗೂಗಲ್ ಡೂಡಲ್‌ನಲ್ಲಿ ನೀಲ್ ಆರ್ಮ್ ಸ್ಟ್ರಾಂಗ್, ವಿಶೇಷತೆಯೇನು?
ನವದೆಹಲಿ, ಜುಲೈ 19: ಎರಡನೇ ಬಾರಿ ಚಂದ್ರನ ಅಂಗಳಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲ ಘಳಿಗೆಯನ್ನು ಗೂಗಲ್ ಡೂಡಲ್ ನೆನಪಿಸಿದೆ.
ಬಾಹುಬಲಿ ಚಂದ್ರನ ಮೇಲೆ ಕಾಲಿಡಲು ಸಿದ್ಧತೆ ನಡೆಸಿದೆ. ಮಾನವ ಸಹಿತ ಉಪಗ್ರಹ ಅಪೋಲೊ 11 ಮಿಷನ್‌ಗೆ ಇಂದಿಗೆ 50 ವರ್ಷ ತುಂಬಿದೆ.
ಈ ಕುರಿತು ಸ್ಮರಣೀಯ ವೀಡಿಯೊ ಒಂದನ್ನು ಅಪ್‌ಲೋಡ್ ಮಾಡಿದ್ದು ಇದು ಸುಮಾರು ಐದು ನಿಮಿಷ ಇದ್ದು, ಅಪೋಲೋ ಗಗನ ನೌಕೆಯ ಉಡಾವಣೆ, ಚಂದ್ರನ ಮೇಲೆ ಪದಾರ್ಪಣೆ ಮತ್ತು ಮರಳಿ ಬರುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ನಾಸಾ 2024ರೊಳಗೆ ಮತ್ತೊಮ್ಮೆ ಚಂದ್ರನ ಅಂಗಳಕ್ಕೆ ಹೋಗುವ ತಯಾರಿ ನಡೆಸುತ್ತಿದೆ.
ನಾನು ಚಂದ್ರನ ಮೇಲೆ ಕಾಲಿರಿಸಿದಾಗ ಭೂಮಿ ತುಂಬಾ ಚಿಕ್ಕದಾಗಿ ಕಾಣುತ್ತಿತ್ತು. ಇಡೀ ಭೂಮಿ ನನ್ನ ಕಣ್ಣಿನಲ್ಲಿ ಕಾಣುತ್ತಿತ್ತು, ಎಂದು ಮೈಖೆಲ್ ಅನುಭವ ಹಂಚಿಕೊಂಡಿದ್ದಾರೆ.

ನಾಸಾ 1969ರಲ್ಲಿ 'ಅಪೋಲೋ 11' ಮಿಷನ್‌ಗೆ ಚಾಲನೆ ನೀಡಿತ್ತು. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಸಹಿತ ಉಪಗ್ರಹ ಇದಾಗಿತ್ತು. ಗೂಗಲ್ ಸರ್ಚ್ ಮಾಡುವವರಿಗೆ ಈ ಡೂಡಲ್ ಗಮನ ಸೆಳೆಯುತ್ತಿದೆ.
ಈ ಐತಿಹಾಸಿಕ ಚಂದ್ರಲೋಕ ಯಾತ್ರೆಯನ್ನು ವಿವರಣೆ ಸಹಿತವಾಗಿ ನೋಡಬಹುದಾಗಿದೆ. ಕಮಾಂಡ್ ಮಾಡ್ಯೂಲ್ ಪೈಲಟ್ ಮೈಕೆಲ್ ಕಾಲಿನ್ಸ್ ಅವರ ಧ್ವನಿಯಲ್ಲಿ ಅನುಭವದ ಕಥನವಿದೆ.
ಈ ಭರ್ಜರಿ ಯೋಜನೆಯ ಹಿಂದೆ ಜಗತ್ತಿನ 4 ಲಕ್ಷ ಮಂದಿಯ ಕೊಡುಗೆಯಿದೆ. ನೀಲ್ ಆರ್ಮ್‌ಸ್ಟ್ರಾಂಗ್, ಎಡ್ವಿನ್ ಬುಝ್ ಆಲ್ಡರಿನ್ ಹಾಗೂ ಮೈಕೆಲ್ ಕಾಲಿನ್ಸ್ ಅವರು ಚಂದ್ರನ ಮೇಲೆ ಕಾಲಿಟ್ಟಿದ್ದು, ಅವರ ಜತೆಗೆ, ಭೂಮಿಯಲ್ಲೇ ಇರುವ ಫ್ಯಾಕ್ಟರಿ ಕೆಲಸಗಾರರು, ವಿಜ್ಞಾನಿಗಳು ಮತ್ತು ಎಂಜಿನಿಯರುಗಳ ಶ್ರಮವಿದೆ ಎಂದು ಕಾಲಿನ್ಸ್ ವಿವರಿಸುತ್ತಾರೆ.












Click it and Unblock the Notifications