ಬೆಂಗಳೂರಿಗೆ ಮಾದಕ ವಸ್ತು ಪೂರೈಕೆ; ದೆಹಲಿಯಲ್ಲಿ ವ್ಯಕ್ತಿ ಬಂಧನ

ನವದೆಹಲಿ, ಸೆಪ್ಟೆಂಬರ್ 01: ಕರ್ನಾಟಕದಲ್ಲಿ ಮಾದಕ ವಸ್ತುಗಳ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಯುತ್ತಿದೆ. ಬೆಂಗಳೂರು ನಗರಕ್ಕೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ವ್ಯಕ್ತಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

Recommended Video

      Indrajith Lankesh First Reaction After CCB Enquiry | Sandalwood Drug Mafia | Filmibeat Kannada

      ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ಅಧಿಕಾರಿಗಳು ದೆಹಲಿಯಲ್ಲಿ ಮಂಗಳವಾರ ಎಫ್. ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಕಾರು ಚಾಲಕನಾಗಿದ್ದು, ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

      ಬಂಧಿತ ಆರೋಪಿಯಿಂದ ಮಾರಿಜುವಾ ಎಂಬ ಮೂರೂವರೆ ಕೆಜಿ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಕೆನಡಾದಿಂದ ಮಾದಕ ವಸ್ತುವನ್ನು ತರಿಸಿ ಈತ ಸರಬರಾಜು ಮಾಡುತ್ತಿದ್ದ.

      NCB Arrested Drug Peddler In Delhi Who Supply Drug To Bengaluru

      ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಎಫ್. ಅಹ್ಮದ್ ಬಂಧಿಸಿದ್ದಾರೆ. ಮಾದಕ ವಸ್ತುಗಳನ್ನು ಮುಂಬೈಗೆ ಕಳಿಸಿ ಅಲ್ಲಿಂದ ಬೆಂಗಳೂರಿಗೆ ಕಳಿಸಲಾಗುತ್ತಿತ್ತು ಎಂಬ ಮಾಹಿತಿ ಎನ್‌ಸಿಬಿಗೆ ಸಿಕ್ಕಿದೆ.

      ಕರ್ನಾಕದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಎನ್‌ಸಿಬಿ ತನಿಖೆ ನಡೆಸುತ್ತಿದೆ. ಕಿಂಗ್ ಪಿನ್ ಅನಿಕಾಳನ್ನು ಬಂಧಿಸಲಾಗಿದ್ದು, ಕನ್ನಡ ಚಿತ್ರರಂಗದ ನಟ, ನಟಿಯರಿಗೆ ಡ್ರಗ್ಸ್ ಪೂರೈಕೆ ಆಗುತ್ತಿತ್ತು ಎಂಬ ಆರೋಪಗಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+