ಮೇ 30ರ ಗುರುವಾರ ರಾತ್ರಿ 7ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ

Recommended Video

      ಮೋದಿ ಪ್ರಧಾನಿಯಾಗೋ ಸಮಾರಂಭವನ್ನು ರಾಷ್ಟ್ರಪತಿಗಳು ಫಿಕ್ಸ್ ಮಾಡಿದ್ರು..!

      ನವದೆಹಲಿ, ಮೇ 26 : ಮೇ 30ರ ಗುರುವಾರ ರಾತ್ರಿ 7 ಗಂಟೆ ನವದೆಹಲಿಯಲ್ಲಿ ಇರುವ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಆಧಿಕೃತವಾಗಿ ಮಾಹಿತಿ ಬಂದಿದೆ.

      ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಆವರು ಪ್ರಧಾನಮಂತ್ರಿ ಹಾಗೂ ಸಂಪುಟದ ಇತರ ಸಚಿವರಿಗೆ ಪ್ರಮಾಣ ವಚನ ಹಾಗೂ ಗೋಪ್ಯತಾ ಪ್ರಮಾಣವನ್ನು ಬೋಧಿಸಲಿದ್ದಾರೆ. ಈ ಬಗ್ಗೆ ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್ ಮಾಹಿತಿ ನೀಡಿದ್ದಾರೆ.

      ಮೇ ಇಪ್ಪತ್ತೈದನೇ ತಾರೀಕಿನಂದು ಎನ್ ಡಿಎ ಮೈತ್ರಿ ಕೂಟದ ಅಧ್ಯಕ್ಷರಾಗಿ ನರೇಂದ್ರ ಮೋದಿ ಅವರು ಸರ್ವಾನುಮತದಿಂದ ಆಯ್ಕೆಯಾದರು. ಆ ನಂತರ ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಬಹುಮತ ಹೊಂದಿದ ಬಿಜೆಪಿಯ ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಸರಕಾರ ರಚನೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಆಹ್ವಾನ ನೀಡಿದ್ದಾರೆ.

      Narendra Modi

      ಸಂವಿಧಾನ ಬದ್ಧವಾಗಿ ನರೇಂದ್ರ ಮೋದಿ ಅವರನ್ನು ಭಾರತದ ಪ್ರಧಾನಿಯಾಗಿ ನಿಯೋಜಿಸಿದ ರಾಷ್ಟ್ರಪತಿಗಳು, ಕೇಂದ್ರ ಸಂಪುಟದ ಸಚಿವರ ಹೆಸರನ್ನು ಸೂಚಿಸುವಂತೆ ಕೇಳಿದ್ದಾರೆ. ಜತೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಪದವಿ ಪ್ರಮಾಣ ಸಮಾರಂಭದ ದಿನಾಂಕ, ಸಮಯದ ವಿವರಗಳನ್ನು ನೀಡಿದ್ದಾರೆ.

      ಒಟ್ಟು 543 ಸದಸ್ಯ ಬಲದ ಸಂಸತ್ ನಲ್ಲಿ 542 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಎನ್ ಡಿಎ ಮೈತ್ರಿ ಕೂಟವು 353 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿಯೊಂದರಿಂದಲೇ 303 ಸಂಸದರು ಆಯ್ಕೆಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+