ಮೋದಿ ಬಳಸೋದು 5 ಸ್ಟಾರ್ ಹೋಟೆಲ್ ಅಲ್ಲ, ಮತ್ತೆ ಯಾವುದು?

ನವದೆಹಲಿ, ನವೆಂಬರ್ 28: ಪ್ರಧಾನಿ ನರೇಂದ್ರ ಮೋದಿಯವರು ವಾಸ್ತವ್ಯ ಹೂಡಲು 5 ಸ್ಟಾರ್ ಹೋಟೆಲ್ ಗಳನ್ನು ಬಳಸಲ್ಲ, ವಿಮಾನ ನಿಲ್ದಾಣದ ಟರ್ಮಿನಲ್ ಗಳಲ್ಲೇ ಉಳಿಯುತ್ತಾರೆ ಎಂದು ಮೋದಿಯವರ ಸರಳ ಜೀವನದ ಕುರಿತು ಕುತೂಹಲಕಾರಿ ಸಂಗತಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅಮಿತ್ ಶಾ, ಸರಳವಾಗಿ ಜೀವನ ನಡೆಸುವುದು ಪ್ರಧಾನಿಯವರ ಮೊದಲ ಆದ್ಯತೆಯಾಗಿದೆ, ಅನವಶ್ಯಕ ದುಂದು ವೆಚ್ಚವನ್ನು ತಡೆಗಟ್ಟುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು.

ಮೋದಿಯವರು ವಿದೇಶ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಬಂದಾಗ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲೇ ಉಳಿಯುತ್ತಾರೆ ವಿನಃ ಯಾವುದೇ ಪಂಚತಾರಾ ಹೋಟೆಲ್ ಗಳಿಗೆ ಹೋಗುವುದಿಲ್ಲ ಅಲ್ಲಿಯೇ ಸ್ನಾನ, ವಿಶ್ರಾಂತಿ ಪಡೆಯುತ್ತಾರೆ ಎಂದು ತಿಳಿಸಿದರು.

Narendra Modi Is not Using A 5star Hotel, Then what?

ವಿಮಾನಕ್ಕೆ ಇಂಧನ ಮತ್ತು ವಿಮಾನದ ತಾಂತ್ರಿಕ ದೋಷಗಳದ್ದಲ್ಲಿ ಬೇರೆ ಹೋಟೆಲ್ ಗೆ ಹೋಗದೇ ವಿಮಾನ ನಿಲ್ದಾಣದಲ್ಲೇ ಇದ್ದು ವಿಶ್ರಾಂತಿ ಪಡೆಯುತ್ತಾರೆ, ಆದರೆ ಇತರ ದೇಶಗಳ ಮುಖ್ಯಸ್ಥರು ಹಾಗೂ ಅವರ ತಂಡ ಪಂಚತಾರಾ ಹೋಟೆಲ್ ನಲ್ಲಿ ತಂಗುತ್ತಾರೆ ಎಂದರು.

ಇದು ಪ್ರಧಾನಿ ಮೋದಿತವರ ಸರಳತೆಗೆ ಸಾಕ್ಷಿಯಾಗಿದೆ. ಇತ್ತಿಚೀಗೆ ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಮಾನಕ್ಕೆ ಇಂಧನ ಖಾಲಿಯಾಗಿತ್ತು, ಆಗ ಪಂಚತಾರಾ ಹೋಟೆಲ್ ನ್ನು ಬುಕ್ ಮಾಡಲಾಗಿತ್ತು, ಆದರೆ ಮೋದಿ ಅವರು ವಿಮಾನ ನಿಲ್ದಾಣದಲ್ಲೇ ವಿಶ್ರಾಂತಿ ಪಡೆದಿದ್ದರು ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ.

ಪ್ರಧಾನಿಯವರೊಂದಿಗೆ 4-5 ಜನಗಳಿದ್ದರೆ ಕಾರು ಬಳಸುತ್ತಾರೆ, ಜಾಸ್ತಿ ಜನ ಇದ್ದರೆ ಬಸ್ ಬಳಸಲು ಹೇಳುತ್ತಾರೆ, ಮೋದಿಯವರಿಗೆ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಕಟ್ಟುನಿಟ್ಟಿನ ಜೀವನ ಎಂದರು.

ಯಾವಾಗಲೂ ಶಿಸ್ತು ಕಾಪಾಡಿಕೊಂಡು ಬಂದಿರುವ ಮೋದಿಯವರು, ವಿದೇಶ ಪ್ರವಾಸಕ್ಕೆ ಹೋದಂತಹ ಸಂದರ್ಭದಲ್ಲಿ ತಮ್ಮ ಅಧಿಕಾರಿ ವರ್ಗದಲ್ಲಿ ಶೇ 20 ಮಾತ್ರ ತಮ್ಮ ನಿಯೋಗದಲ್ಲಿ ಕರೆದುಕೊಂಡು ಹೋಗುತ್ತಾರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+