ನಮಸ್ತೆ ಟ್ರಂಪ್: ಸೋಮವಾರ ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳ ವೇಳಾಪಟ್ಟಿ

ನವದೆಹಲಿ, ಫೆಬ್ರವರಿ.24: ವಿಶ್ವದ ದೊಡ್ಡಣ್ಣ.. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಭಾರತವು ಸಿಂಗಾರಗೊಂಡು ನಿಂತಿದೆ. ಕೋಟ್ಯಂತರ ಭಾರತೀಯರ ಕಣ್ಣುಗಳು ಸೋಮವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಗಳ ಮೇಲೆ ನೆಟ್ಟಿದೆ.
ಭಾರತದಲ್ಲಿ ಟ್ರಂಪ್ ದಂಪತಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಮುಂದಿನ 36 ಗಂಟೆಗಳ ಕಾಲ ದೇಶದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಅಮೆರಿಕಾ ಅಧ್ಯಕ್ಷರಿಗೆ ಸಾಥ್ ನೀಡಲಿದ್ದಾರೆ.

Recommended Video

      TrumpInIndia:Donald Trump's Monday program timeline | IndiaWelcomesTrump | NamasteyTrump

      ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ
      ಅಹ್ಮದಾಬಾದ್, ಉತ್ತರ ಪ್ರದೇಶದ ಆಗ್ರಾ ಹಾಗೂ ದೆಹಲಿಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್ ಗಾಗಿ ಅಹ್ಮದಾಬಾದ್ ನಲ್ಲಿ ನಮಸ್ತೆ ಟ್ರಂಪ್ ಎಂಬ ವಿಶಿಷ್ಟ ಹಾಗೂ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೋಮವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಕಾರ್ಯಕ್ರಮಗಳ ವೇಳಾಪಟ್ಟಿ ಹೇಗಿರುತ್ತದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

      Namaste Trump: America President Monday Programme Timeline

      ಸೋಮವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಗಳು:

      - ಸಮಯ: 11:40, ಅಹ್ಮದಾಬಾದ್ ನಲ್ಲಿ ಇರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಟ್ರಂಪ್ ದಂಪತಿ.
      - ಸಮಯ: 12:15, ಏರ್ ಪೋರ್ಟ್ ನಿಂದ 22 ಕಿಲೋ ಮೀಟರ್ ರೋಡ್ ಶೋ ಬಳಿಕ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ
      - ಸಮಯ: 1:05, ಅಹ್ಮದಾಬಾದ್ ನ ಮೊಟೆರಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ. 49 ಸಾವಿರದಿಂದ 1.10 ಲಕ್ಷ ಸಾಮರ್ಥ್ಯದ ನೂತನ ಸ್ಟೇಡಿಯಂ ಉದ್ಘಾಟಿಸಲಿರುವ ಡೊನಾಲ್ಡ್ ಟ್ರಂಪ್.
      - ಸಮಯ: 3.30, ಉತ್ತರ ಪ್ರದೇಶದ ಆಗ್ರಾದತ್ತ ಮುಖ ಮಾಡಲಿರುವ ಡೊನಾಲ್ಡ್ ಟ್ರಂಪ್ ದಂಪತಿ
      - ಸಮಯ: 5:15, ಉತ್ತರ ಪ್ರದೇಶದ ಆಗ್ರಾದಲ್ಲಿ ಇರುವ ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡಲಿರುವ ಟ್ರಂಪ್ ದಂಪತಿ
      - ಸಮಯ: 5:45, ದೆಹಲಿ ಕಡೆಗೆ ಟ್ರಂಪ್ ದಂಪತಿ ಪ್ರಯಾಣ
      - ಸಮಯ: 7:30, ದೆಹಲಿಯ ಪಾಲಂ ವಾಯು ಪಡೆ ಕೇಂದ್ರಕ್ಕೆ ಭೇಟಿ, ನಂತರ ದೆಹಲಿಯ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿರುವ ಟ್ರಂಪ್

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+