ಬೈಕ್ ನಲ್ಲಿ ಬಂದ ಅಪಹರಣಕಾರರಿಂದ ಮಗುವನ್ನು ರಕ್ಷಿಸಿದ ತಾಯಿ

ನವದೆಹಲಿ, ಜುಲೈ.22: ರಾಷ್ಟ್ರ ರಾಜಧಾನಿಯಲ್ಲಿ ಅಪಹರಣಕಾರರ ಅಟ್ಟಹಾಸ ಇಂದಿಗೂ ತಗ್ಗಿದಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತಾ ಘಟನೆಯೊಂದು ನವದೆಹಲಿಯಲ್ಲಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಸಾಕಷ್ಟು ವೈರಲ್ ಆಗುತ್ತಿವೆ.

ನವದೆಹಲಿಯ ಶಕರ್ ಪುರ್ ಪ್ರದೇಶದಲ್ಲಿ ಹಾಡಹಗಲಲ್ಲೇ ಬೈಕಿನಲ್ಲಿ ಆಗಮಿಸಿದ ಅಪಹರಣಕಾರರು ಮನೆಯ ಬಾಗಿಲಲ್ಲಿ ತಾಯಿಯ ಜೊತೆಗೆ ನಿಂತಿದ್ದ ನಾಲ್ಕು ವರ್ಷದ ಮಗುವನ್ನು ಕಿತ್ತುಕೊಂಡು ಪರಾರಿ ಆಗಲು ಯತ್ನಿಸಿದ್ದಾರೆ.

Mother Of A 4-Year-Old Girl Saved Her Daughter From Kidnappers In Shakarpur

ತನ್ನ ಜೊತೆಗಿದ್ದ ಮಗುವನ್ನು ಅಪರಿಚಿತರು ಕಿತ್ತುಕೊಂಡು ಹೋಗುತ್ತಿದ್ದನ್ನು ಕಂಡಾಕ್ಷಣ ಎಚ್ಚೆತ್ತ ತಾಯಿ ಓಡಿ ಬಂದಿದ್ದಾರೆ. ಬೈಕ್ ಏರಲು ಯತ್ನಿಸಿದ ಅಪಹರಣಕಾರರನ್ನು ಹೊಡೆದು ಮಗುವನ್ನು ಎಳೆದುಕೊಂಡಿದ್ದಾಳೆ. ಇದರಿಂದ ಗಾಬರಿಯಾದ ಅಪಹರಣಕಾರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದಿಷ್ಟು ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಪಹರಣಕಾರರನ್ನು ಹಿಡಿಯಲು ಬೈಕ್ ಅಡ್ಡ:

ಮಗುವನ್ನು ಅಪಹರಿಸಲು ವಿಫಲರಾದ ಕಿಡ್ನಾಪರ್ಸ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಸಾರ್ವಜನಿಕರು ಅಪಹರಣಕಾರರನ್ನು ಬೆನ್ನಟ್ಟಿ ಹಿಡಿಯುವುದಕ್ಕೆ ಮುಂದಾದರು. ಇದನ್ನು ಗಮನಿಸಿದ ಸ್ಥಳೀಯರು ರಸ್ತೆಯ ಮಧ್ಯದಲ್ಲಿಯೇ ಬೈಕ್ ಅಡ್ಡ ನಿಲ್ಲಿಸಿ ಕಿಡ್ನಾಪರ್ಸ್ ನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಹೆಲ್ಮೆಟ್ ನಿಂದ ಹೊಡೆದು ಅಲ್ಲಿಂದ ಅಪಹರಣಕಾರರು ಪರಾರಿಯಾಗಿದ್ದಾರೆ. ಇನ್ನು, ಅಪಹರಣಕ್ಕೆ ಬಳಸಿದ ಬೈಕ್ ನಂಬರ್ ಕೂಡಾ ನಕಲಿ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+