ಭಾರತದಲ್ಲೇ 400ರ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರು!
ನವದೆಹಲಿ, ಮಾರ್ಚ್.23: ಡ್ರ್ಯಾಗನ್ ರಾಷ್ಟ್ರದಲ್ಲಿ ಅಬ್ಬರಿಸಿ ಬೊಬ್ಬಿರಿದ ಕೊರೊನಾ ವೈರಸ್ ಸೋಂಕು ಭಾರತೀಯರಲ್ಲೂ ಭೀತಿ ಹುಟ್ಟು ಹಾಕುತ್ತಿದೆ. ಕ್ಷಣಕ್ಷಣಕ್ಕೂ ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ.
ಕಳೆದ 24 ಗಂಟೆಗಳಲ್ಲೇ 100ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ. ಇದರಿಂದ ಭಾರತದಲ್ಲಿ ಸೋಂಕಿತರ ಸಂಖ್ಯೆಯು 400ರ ಗಡಿ ದಾಟಲಿದ್ದು, ಮತ್ತಷ್ಟು ಆತಂಕವನ್ನು ಹುಟ್ಟು ಹಾಕಿದೆ.
ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?
ಇನ್ನು, ಕೊರೊನಾ ವೈರಸ್ ನಿಂದಾಗಿ ಮೃತಪಟ್ಟವರ ಸಂಖ್ಯೆಯು 14,611 ಆಗಿದ್ದು, 15 ಸಾವಿರಕ್ಕೆ ಸನ್ನಿಹಿತವಾಗಿದೆ. ಸೋಂಕಿತರ ಸಂಖ್ಯೆಯು 3,36,638ಕ್ಕೂ ಹೆಚ್ಚಾಗಿದ್ದು, ವಿಶ್ವದಲ್ಲಿ ಇದುವರೆಗೂ 97,636ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಭಾರತದಲ್ಲಿ 75 ಜಿಲ್ಲೆಗಳು ಸಂಪೂರ್ಣ ಶೆಡ್ ಡೌನ್:
ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರು ಮತ್ತು ಶಂಕಿತರು ಕಾಣಿಸಿಕೊಂಡ ಹಿನ್ನೆಲೆ 75 ಜಿಲ್ಲೆಗಳನ್ನು ಮುಂದಿನ ಹತ್ತು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ. 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವ ನಿಟ್ಟಿನಲ್ಲಿ ಆದೇಶವನ್ನು ಹೊರಡಿಸಲಾಗಿದೆ. ಆದರೆ, ಅಗತ್ಯ ವಸ್ತುಗಳಾದ ಹಣ್ಣು-ತರಕಾರಿ, ಮೆಡಿಕಲ್ ಶಾಪ್, ಪೆಟ್ರೋಲ್-ಡೀಸೆಲ್, ಹೋಟೆಲ್ ಹಾಗೂ ಆಹಾರ ಸಾಮಗ್ರಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications