• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?

|

ನವದೆಹಲಿ, ಮಾರ್ಚ್.15: ಈ ಶತಮಾನದ ಮಾರಕ ರೋಗವೇ ಕೊರೊನಾ ವೈರಸ್. ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಡೆಡ್ಲಿ ಕೊರೊನಾ ವೈರಸ್ ಗಿಂತಲೂ ಮಾರಕ ರೋಗಗಳನ್ನು ಈ ಹಿಂದೆಯೇ ಭಾರತವು ಎದುರಿಸಿದೆ.

ಪ್ಲೇಗ್, ಕಾಲರಾ, ಬಾಂಬೆ ಜ್ವರ ಅಥವಾ ಸ್ಪ್ಯಾನಿಶ್ ರಾಷ್ಟ್ರದಲ್ಲಿ ಕಾಣಿಸಿಕೊಂಡ ಶೀತಜ್ವರಕ್ಕೆ ಭಾರತದಲ್ಲಿ ಸಾವಿರ ಸಾವಿರ ಜನರು ಪ್ರಾಣ ಬಿಟ್ಟಿರುವ ಇತಿಹಾಸವಿದೆ. ಇನ್ನು, ಭಾರತವು ಮಾರಕ ಸೋಂಕುಗಳನ್ನು ಬೇರೆ ರಾಷ್ಟ್ರಗಳಿಗಿಂತಲೂ ಹೆಚ್ಚು ಸಮರ್ಥವಾಗಿ ಎದುರಿಸಿರುವ ಉದಾಹರಣೆಗಳೂ ಇವೆ.

ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ ಗಿಡಮೂಲಕೆ ಮತ್ತು ಆಯುರ್ವೇದಿಕ್ ಔಷಧಿಗಳು ಹೆಚ್ಚು ಪರಿಣಾಮಕಾರಿಯಾಗಿ ಮಾರಕ ರೋಗಗಳ ಮೇಲೆ ಪ್ರಭಾವ ಬೀರಿವೆ. ಇದೇ ಇತಿಹಾಸವು ಈಗ ಭಾರತದ ಪಾಲಿಗೆ ವರವಾಗುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿಂದಿನ ಅನುಭವವನ್ನು ಬಳಸಿಕೊಂಡು ಕೊರೊನಾ ವೈರಸ್ ವಿರುದ್ಧ ಭಾರತವು ಹೇಗೆ ಹೋರಾಡಬಹುದು ಎಂಬುದರ ಕುರಿತು ವಿಶ್ಲೇಷಣಾತ್ಮಕ ವರದಿ.

102 ವರ್ಷಗಳ ಹಿಂದೆಯೂ ಇಂಥದ್ದೇ ಪರಿಸ್ಥಿತಿ

102 ವರ್ಷಗಳ ಹಿಂದೆಯೂ ಇಂಥದ್ದೇ ಪರಿಸ್ಥಿತಿ

ಕಳೆದ 1918ರ ಜೂನ್ ತಿಂಗಳಿನಲ್ಲಿ ಭಾರತದಲ್ಲಿ ಬಾಂಬೆ ಜ್ವರ ಎಂಬ ಸಾಂಕ್ರಾಮಿಕ ರೋಗ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಅಂದು ಅಂಗಡಿ-ಮುಂಗಟ್ಟುಗಳನ್ನೆಲ್ಲ ಬಂದ್ ಮಾಡಲಾಗಿದ್ದು, ಸರ್ಕಾರಿ ಕಚೇರಿಗಳಿಗೆ ಬೀಗ ಜಡಿಯಲಾಗಿತ್ತು. ದೇಶದ ಪ್ರಜೆಗಳು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಲಾಗಿತ್ತು.

ಕೊರೊನಾ ವೈರಸ್ ಮತ್ತು ಭಾರತಕ್ಕೂ 102 ವರ್ಷಗಳ ಹಳೆಯ ನಂಟು!

ಸ್ಪ್ಯಾನಿಶ್ ಟು ಇಂಡಿಯಾ; ಸೋಂಕು ಹರಡಿದ ಪರಿ ಹೇಗಿತ್ತು?

ಸ್ಪ್ಯಾನಿಶ್ ಟು ಇಂಡಿಯಾ; ಸೋಂಕು ಹರಡಿದ ಪರಿ ಹೇಗಿತ್ತು?

ಕಳೆದ 1918ರ ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ಸ್ಪ್ಯಾನಿಶ್ ರಾಷ್ಟ್ರದಲ್ಲಿ ಶೀತಜ್ವರವು ಕಾಣಿಸಿಕೊಂಡಿತು. ಅದಾಗಿ ಮೂರು ವಾರಗಳ ಬಳಿಕ ಬಾಂಬೆ ಬಂದರು ಪ್ರದೇಶದ ಮೂಲಕ ದೇಶವನ್ನು ಪ್ರವೇಶಿಸಿದ ಬಾಂಬೆ ಶೀತಜ್ವರದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಾಖ್ಯಾನಿಸಿದ್ದಾರೆ. ಭಾರತದಲ್ಲಿ ಕಾಣಿಸಿಕೊಂಡ ಭಯಾನಕ ಜ್ವರಕ್ಕೆ ಬಾಂಬೆ ಶೀತಜ್ವರ ಅಥವಾ ಬಾಂಬೆ ಜ್ವರ ಎಂದು ಜನರು ಕರೆಯುತ್ತಿದ್ದರು. ಬಾಂಬೆ ಬಂದರು ಪ್ರದೇಶದಲ್ಲಿ ಮೊದಲ ಕಾಣಿಸಿಕೊಂಡ ಮಾರಕ ಜ್ವರವು ಕ್ರಮೇಣ ಮದ್ರಾಸ್(ಚೆನ್ನೈ) ಮತ್ತು ಅಲಹಾಬಾದ್ ಗೆ ಹರಡಿತು.

ಭಾರತದಲ್ಲಿ ಮೂರೇ ತಿಂಗಳಿನಲ್ಲಿ ಚಿತ್ರಣವೇ ಬದಲು

ಭಾರತದಲ್ಲಿ ಮೂರೇ ತಿಂಗಳಿನಲ್ಲಿ ಚಿತ್ರಣವೇ ಬದಲು

ಬಾಂಬೆ ಶೀತಜ್ವರದ ಮೊದಲ ಪ್ರಕರಣ ಕಾಣಿಸಿಕೊಂಡು ಮೂರು ತಿಂಗಳಿನಲ್ಲಿ ಭಾರತದಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯಿತು. ಅಕ್ಟೋಬರ್ ಹೊತ್ತಿಗೆ ದೇಶದಲ್ಲಿನ ಆರೋಗ್ಯ ವ್ಯವಸ್ಥೆಯೇ ಪಾತಾಳಕ್ಕೆ ಕುಸಿಯಿತು. ಸ್ವ-ಸಹಾಯ ಮತ್ತು ಸಹಕಾರ ಪದ್ಧತಿ ಅನುಸರಿಸುವಂತೆ ಪತ್ರಿಕೆಗಳಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

ಕೊರೊನಾ ಕೀಚಕ: ಸಾವಿನ ಸುರುಳಿ ಸುತ್ತಿಕೊಂಡ ಟಾಪ್-10 ರಾಷ್ಟ್ರಗಳು

ಭಾರತದಲ್ಲಿ ಸರ್ಕಾರ ಮತ್ತು ಆಡಳಿತ ಶೈಲಿಯೇ ಬದಲು

ಭಾರತದಲ್ಲಿ ಸರ್ಕಾರ ಮತ್ತು ಆಡಳಿತ ಶೈಲಿಯೇ ಬದಲು

ಇನ್ನು, 1918ಕ್ಕೂ ಈಗಿನ 2020ಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. 102 ವರ್ಷಗಳ ಹಿಂದೆ ಭಾರತದಲ್ಲಿ ವಸಾಹತುಶಾಹಿ ಸರ್ಕಾರವು ಆಡಳಿತ ನಡೆಸುತ್ತಿತ್ತು. ಭಾರತೀಯರನ್ನು ಕಾಡುತ್ತಿರುವ ಕೊರೊನಾ ವೈರಸ್ ತಾಂತ್ರಿಕವಾಗಿ ಭಿನ್ನವಾಗಿದೆ. ಬಾಂಬೆ ಶೀತಜ್ವರದ ಮತ್ತು ಕೊರೊನಾ ವೈರಸ್ ನಡುವೆ ಕೆಲವು ಹೋಲಿಕೆಗಳಿದ್ದರೂ ಈ ಸೋಂಕಿಗೆ ಶತಮಾನಗಳ ಹಿಂದೆ ಬಳಸಿದ ಔಷಧಿಗಳನ್ನು ಮದ್ದು ಎಂದು ನಂಬಲು ಸಾಧ್ಯವಿಲ್ಲ.

ಇತಿಹಾಸ ನೆರವಾಗುತ್ತಾ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ?

ಇತಿಹಾಸ ನೆರವಾಗುತ್ತಾ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ?

ಕಳೆದ 1918ರಲ್ಲಿ ಕಾಣಿಸಿಕೊಂಡ ಬಾಂಬೆ ಜ್ವರದ ಔಷಧಿಗಳು ಇಂದಿನ ಕೊರೊನಾ ವೈರಸ್ ನಿವಾರಣೆಗೆ ಮದ್ದು ಆಗಲಾರದು. ಆದರೆ, 102 ವರ್ಷಗಳ ಹಿಂದೆ ಕಾಣಿಸಿಕೊಂಡ ರೋಗವನ್ನು ಭಾರತ ಎದುರಿಸಿದ ಪರಿ ಇಂದು ಭಾರತೀಯರಿಗೆ ಮಾರ್ಗದರ್ಶಿಯಾಗಿ ನಿಲ್ಲುವ ಸಾಧ್ಯತೆಗಳಿವೆ. ಏಕೆಂದರೆ, 19ನೇ ಶತಮಾನದ ಆದಿಯಲ್ಲಿ ಅನಿರೀಕ್ಷಿತವಾಗಿ ಎದುರಾದ ಸಾಂಕ್ರಾಮಿಕ ಪಿಡುಗನ್ನು ಭಾರತೀಯರು ಹೇಗೆ ಎದುರಿಸಿದರು ಎಂಬುದನ್ನು ಅರಿತರೆ ಈಗ ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

ಕೊರೊನಾ ನಿಯಂತ್ರಣಕ್ಕೆ ಇತಿಹಾಸದ ದಾಖಲೆಗಳಿಂದ ನೆರವು

ಕೊರೊನಾ ನಿಯಂತ್ರಣಕ್ಕೆ ಇತಿಹಾಸದ ದಾಖಲೆಗಳಿಂದ ನೆರವು

1918ರಲ್ಲಿ ಎದುರಾದ ಅತ್ಯಂತ ಕಷ್ಟದ ಸನ್ನಿವೇಶವನ್ನು ಭಾರತವು ಹೇಗೆ ಸಮರ್ಥವಾಗಿ ಎದುರಿಸಿತು. ಸಾಂಕ್ರಾಮಿಕ ಪಿಡುಗುಗಳ ವಿರುದ್ಧ ಸೆಣಸಾಡಲು ಯಾವು ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿತ್ತು. 100 ವರ್ಷಗಳ ಹಿಂದೆ ಬಾಂಬೆ ಜ್ವರದ ತೀವ್ರತೆ ಹೇಗಿದ್ದು ಎಂಬುದನ್ನು ನಾವುಗಳು ಮೊದಲು ಅರ್ಥಮಾಡಿಕೊಳ್ಳಬೇಕಿದೆ. ಈ ಹಿಂದೆ ಭಾರತವು ಸಾಂಕ್ರಾಮಿಕ ಪಿಡುಗನ್ನು ಹೇಗೆ ಎದುರಿಸಿತು ಎಂಬುದರ ದಾಖಲೆಗಳನ್ನು ಪರಿಶೀಲಿಸಬೇಕು. ಅದರಿಂದ ಈಗ ಎದುರಾಗಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಾಯಕವಾಗಲಿದೆ ಎಂದು ಅಹ್ಮದಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಇತಿಹಾಸ ತಜ್ಞ ಚಿನ್ಮಯ್ ತುಂಬೆ ಅಭಿಪ್ರಾಯಪಟ್ಟಿದ್ದಾರೆ.

ಎರಡು ಕೋಟಿಗೂ ಅಧಿಕ ಮಂದಿ ಸ್ಪ್ಯಾನಿಶ್ ಜ್ವರಕ್ಕೆ ಬಲಿ

ಎರಡು ಕೋಟಿಗೂ ಅಧಿಕ ಮಂದಿ ಸ್ಪ್ಯಾನಿಶ್ ಜ್ವರಕ್ಕೆ ಬಲಿ

ಇನ್ನು, ಕಳೆದ 1918ರಲ್ಲಿ ಸ್ಪ್ಯಾನಿಷ್ ರಾಷ್ಟ್ರದಲ್ಲಿ ಕಾಣಿಸಿಕೊಂಡ ಶೀತಜ್ವರಕ್ಕೆ ವಿದೇಶಗಳಲ್ಲಿ ಕನಿಷ್ಠ 5 ರಿಂದ 10 ಕೋಟಿಗೂ ಅಧಿಕ ಜನರು ಪ್ರಾಣ ಬಿಟ್ಟಿದ್ದರು. ಈ ಪೈಕಿ 1 ರಿಂದ 2 ಕೋಟಿಗೂ ಅಧಿಕ ಜನ ಭಾರತೀಯರು ಮಾರಕ ಶೀತಜ್ವರದಿಂದ ಮೃತಪಟ್ಟಿದ್ದರು. ಅಂದು ಸ್ಪ್ಯಾನಿಶ್ ಜ್ವರಕ್ಕೆ ಬಲಿಯಾದವರ ಸಂಖ್ಯೆಯನ್ನು ಪರಿಗಣಿಸಿದಾಗ ಭಾರತವು 5ನೇ ಅತಿದೊಡ್ಡ ರಾಷ್ಟ್ರ ಎನಿಸಿತ್ತು.

ಮಹಾತ್ಮ ಗಾಂಧೀಜಿಯವರಲ್ಲೂ ಶೀತಜ್ವರದ ಸೋಂಕು!

ಮಹಾತ್ಮ ಗಾಂಧೀಜಿಯವರಲ್ಲೂ ಶೀತಜ್ವರದ ಸೋಂಕು!

ದೇಶದಲ್ಲಿ ಬಾಂಬೆ ಜ್ವರದ ಹಾವಳಿ ಇರುವಾಗಲೇ ಮಹಾತ್ಮ ಗಾಂಧೀಜಿ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿತ್ತು. ಈ ಬಗ್ಗೆ ಗಂಗಾಬೆನ್ ಎಂಬುವವರಿಗೆ ಬರೆದ ಪತ್ರದಲ್ಲಿ ಅವರೇ ಉಲ್ಲೇಖಿಸಿದ್ದಾರೆ. ನಮ್ಮ ಪೂರ್ವಜರು ದೇಹಪ್ರಕೃತಿಯನ್ನು ಸದೃಢವಾಗಿ ಇಟ್ಟುಕೊಂಡಿದ್ದರು. ಆದರೆ, ಈಗಿನ ವಾತಾವರಣದಲ್ಲಿ ನಾವು ಬಹಳ ಬೇಗನೇ ಗಾಳಿಯಲ್ಲಿನ ಸೂಕ್ಷ್ಮಾಣುಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಖ್ಯಾತ ಬರಹಗಾರ ಮುಂಶಿ ಪ್ರೇಮಚಂದ್, ಸ್ವತಃ ಗಾಂಧೀಜಿಯವರೇ ಮಾರಕ ಸೋಂಕಿಗೆ ತುತ್ತಾಗಿದ್ದರು ಎಂದು ಒಂದು ಕಡೆ ಬರೆದಿದ್ದರು ಎನ್ನಲಾಗಿದೆ.

ದೇಶದ ಜಿಡಿಪಿ ಕುಸಿತಕ್ಕೆ ಅಂದು 120 ವರ್ಷಗಳ ಇತಿಹಾಸ

ದೇಶದ ಜಿಡಿಪಿ ಕುಸಿತಕ್ಕೆ ಅಂದು 120 ವರ್ಷಗಳ ಇತಿಹಾಸ

1918ರಲ್ಲಿ ಎದುರಾದ ಸಾಂಕ್ರಾಮಿಕ ಪಿಡುಗಿನಿಂದ 120 ವರ್ಷಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಭಾರತದ ಜಿಡಿಪಿ ಪಾತಾಳಕ್ಕೆ ಕುಸಿದಿತ್ತು. ಶೇ.-10.50ರಷ್ಟು ಒಟ್ಟು ದೇಶೀಯ ಉತ್ಪನ್ನಗಳ ಉತ್ಪಾದನೆಯು ಕುಸಿತ ಕಂಡಿದ್ದು, ಇದರಿಂದ ಸಾಮಾನ್ಯವಾಗಿ ಉತ್ಪನ್ನಗಳ ದರ ಪಾತಾಳಕ್ಕೆ ಇಳಿಯಿತು. ಒಂದು ಕಡೆಯಲ್ಲಿ ಹಣದುಬ್ಬರ ಹಾಗೂ ಇನ್ನೊಂದು ಕಡೆಯಲ್ಲಿ ಉತ್ಪಾದನೆಯಲ್ಲಿ ಗಣನೀಯ ಕುಸಿತ ಕಾಣುತ್ತಿತ್ತು. ಆದರೂ ಕೂಡಾ ಬಾಂಬೆ ಜ್ವರದ ಭೀತಿಯಿಂದ ಸಾರ್ವಜನಿಕರು ಕೆಲಸಕ್ಕೆ ತೆರಳಲು ಮನಸು ಮಾಡುತ್ತಿರಲಿಲ್ಲ. ಸ್ಥೂಲ ಆರ್ಥಿಕ ಪರಿಸ್ಥಿತಿಯಲ್ಲಿ ಅಂದು ಭಾರತೀಯರ ದಿಟ್ಟ ನಡೆ ಅನನ್ಯವಾಗಿತ್ತು ಎಂದು ಅಹ್ಮದಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಇತಿಹಾಸ ತಜ್ಞ ಚಿನ್ಮಯ್ ತುಂಬೆ ತಿಳಿಸಿದ್ದಾರೆ.

ಎಚ್ಚರಿಕೆ ಸಂದೇಶವನ್ನು ರವಾನಿಸಿರುವ ಪ್ರಾಧ್ಯಾಪಕ ತುಂಬೆ

ಎಚ್ಚರಿಕೆ ಸಂದೇಶವನ್ನು ರವಾನಿಸಿರುವ ಪ್ರಾಧ್ಯಾಪಕ ತುಂಬೆ

ದೇಶದಲ್ಲಿ ಈ ಹಿಂದೆ ಅನುಸರಿಸಿದ ಕ್ರಮವನ್ನು ಈಗಲೂ ಅನುಸರಿಸಬೇಕಾದ ಅವಶ್ಯಕತೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸದಂತೆ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಆ ಕೆಲಸವನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಈಗಾಗಲೇ ಜಾರಿಗೊಳಿಸಿವೆ. ಇದರಿಂದ ಆಯಾ ದೇಶಗಳಲ್ಲಿ ವೇಗವಾಗಿ ಸೋಂಕು ಹರಡುವುದಕ್ಕೆ ಕಡಿವಾಣ ಬೀಡುತ್ತದೆ. ಇದರ ಜೊತೆಗೆ ಆರ್ಥಿಕ ಪರಿಸ್ಥಿತಿ ಮೇಲೂ ಹೊಡೆತ ಬೀಳುವ ಅಪಾಯವಿದೆ ಎಂದು ಅಹ್ಮದಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಇತಿಹಾಸ ತಜ್ಞ ಚಿನ್ಮಯ್ ತುಂಬೆ ಎಚ್ಚರಿಸಿದ್ದಾರೆ.

ಮೊದಲ ವರ್ಲ್ಡ್ ವಾರ್ ಸಂದರ್ಭದಲ್ಲಿ ಬಾಂಬೆ ಜ್ವರದ ಕಾಟ

ಮೊದಲ ವರ್ಲ್ಡ್ ವಾರ್ ಸಂದರ್ಭದಲ್ಲಿ ಬಾಂಬೆ ಜ್ವರದ ಕಾಟ

ಬಾಂಬೆ ಶೀತಜ್ವರವು ಹೆಚ್ಚು ಜನರು ಇರುವ ಕಡೆಗಳಲ್ಲಿ ಆದಷ್ಟು ವೇಗವಾಗಿ ಪಸರಿಸಿತು. ವಿಶ್ವದ ಮೊದಲ ಮಹಾಯುದ್ಧದ ಸಂದರ್ಭ ಮಿಲಿಟರಿ ಶಿಬಿರಗಳಲ್ಲಿಯೇ ಸೋಂಕಿತ ಲಕ್ಷಣಗಳು ಕಂಡು ಬಂದವು. ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕಾ ರಾಷ್ಟ್ರಗಳು ಅದನ್ನು ಆರಂಭದಲ್ಲಿ ಗೌಪ್ಯವಾಗಿರಿಸಿದ್ದವು ಎಂದು ಹೇಳಲಾಗುತ್ತಿದೆ. ಇನ್ನು, ಮಹಾಯುದ್ಧದಲ್ಲಿ ಭಾಗಿಯಾಗದ ಸ್ಪೇನ್ ರಾಷ್ಟ್ರ ಸ್ಪ್ಯಾನಿಶ್ ಜ್ವರಕ್ಕೆ ನಲುಗಿ ಹೋಗಿತ್ತು. ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.

20ನೇ ಶತಮಾನದಲ್ಲಿ ಬಾಂಬೆ ಜ್ವರಕ್ಕಿಂತ ಮಾರಕ ರೋಗವಿಲ್ಲ

20ನೇ ಶತಮಾನದಲ್ಲಿ ಬಾಂಬೆ ಜ್ವರಕ್ಕಿಂತ ಮಾರಕ ರೋಗವಿಲ್ಲ

ಇನ್ನು, ಬಾಂಬೆ ಜ್ವರವೇ ಅತ್ಯಂತ ಅಪಾಯಕಾರಿ ಸೋಂಕು ಎಂದು ಅಮೆರಿಕಾದ ಲೋವಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರಜ್ಞ ಜೋಹಾನ್ ಹ್ಯೂಲ್ಟನ್ ತಿಳಿಸಿದ್ದರು. 20ನೇ ಶತಮಾನದಲ್ಲಿ ಕಾಣಿಸಿಕೊಳ್ಳುವ ಮಾರಕ ಸೋಂಕುಗಳ ಕುರಿತು ಜೋಹಾನ್ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದರು. 2005ರ ವೇಳೆಯವರೆಗೂ 1918ರಲ್ಲಿ ಕಾಣಿಸಿಕೊಂಡ ಬಾಂಬೆಜ್ವರಕ್ಕಿಂತ ಮಾರಕ ಸಾಂಕ್ರಾಮಿಕ ಪಿಡುಗು ಮತ್ತೊಂದು ಇಲ್ಲ ಎಂದು ಹೇಳಿದ್ದರು.

ಶತಮಾನದ ಹಿಂದೆಯೂ ಬಾಂಬೆ ಜ್ವರಕ್ಕೆ ಯಾವುದೇ ಲಸಿಕೆ ಇರಲಿಲ್ಲ

ಶತಮಾನದ ಹಿಂದೆಯೂ ಬಾಂಬೆ ಜ್ವರಕ್ಕೆ ಯಾವುದೇ ಲಸಿಕೆ ಇರಲಿಲ್ಲ

19ನೇ ಶತಮಾನದ ಆದಿಯಲ್ಲಿ ಕಾಣಿಸಿಕೊಂಡ ಬಾಂಬೆ ಜ್ವರಕ್ಕೆ ಭಾರತವಷ್ಟೇ ಅಲ್ಲ ವಿಶ್ವದಾದ್ಯಂತ ಯಾವುದೇ ದೇಶಗಳಲ್ಲಿಯೂ ಲಸಿಕೆ ಅಥವಾ ಔಷಧಿಯನ್ನು ಕಂಡು ಹಿಡಿದಿರಲಿಲ್ಲ. ಅಂದು ಕೂಡಾ ಸೋಂಕನ್ನು ಪ್ರತ್ಯೇಕಿಸುವುದು, ಸೋಂಕಿತರನ್ನು ದಿಗ್ಬಂಧನದಲ್ಲಿ ಇರಿಸುವುದು, ಜನರಲ್ಲಿ ಜಾಗೃತಿ ಮೂಡಿಸುವಂತಾ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಅದೇ ಮಾರ್ಗವನ್ನು ಇಂದು ಸಾಂಕ್ರಾಮಿಕ ಪಿಡುಗು ಆಗಿ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ನಿಂದ ಪಾರಾಗಲು ಭಾರತದ ಆದಿಯಾಗಿ ಎಲ್ಲ ರಾಷ್ಟ್ರಗಳು ಪಾಲನೆ ಮಾಡುತ್ತಿವೆ.

ಭಾರತದಲ್ಲಿ ಕೊರೊನಾ ಸೋಂಕಿತರಿಗಾಗಿ 6,50,000 ಬೆಡ್ ವ್ಯವಸ್ಥೆ

ಭಾರತದಲ್ಲಿ ಕೊರೊನಾ ಸೋಂಕಿತರಿಗಾಗಿ 6,50,000 ಬೆಡ್ ವ್ಯವಸ್ಥೆ

ವಿಶ್ವವನ್ನು ಬೆಚ್ಚಿ ಬೀಳಿಸಿದ್ದ ಕೊರೊನಾ ವೈರಸ್ ವಿರುದ್ಧ ಬೇರೆ ರಾಷ್ಟ್ರಗಳು ಹೋರಾಡುತ್ತಿರುವ ಸಂದರ್ಭದಲ್ಲಿಯೇ ಭಾರತವು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ 6,50,000 ಬೆಡ್ ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದು ವಿಶ್ವದಲ್ಲೇ ಐತಿಹಾಸಿಕ ನಡೆಯಾಗಿದೆ.

ಮಾರಕ ಕೊರೊನಾ ನಿಯಂತ್ರಿಸಲು ದೇಶದ ಮುಂದಿರುವ ಆಯ್ಕೆಗಳು

ಮಾರಕ ಕೊರೊನಾ ನಿಯಂತ್ರಿಸಲು ದೇಶದ ಮುಂದಿರುವ ಆಯ್ಕೆಗಳು

ವಿಶ್ವದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವ ಭಾರತಕ್ಕೆ ಕೊರೊನಾ ವೈರಸ್ ನಿಯಂತ್ರಿಸುವುದು ಎಷ್ಟು ಅತ್ಯಗತ್ಯವೋ, ಅಷ್ಟೇ ಸುಗಮ ಆಗಿದೆ. ಮೊದಲಿಗೆ ಸಾರ್ವತ್ರಿಕ ಮತ್ತು ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಬೇಕು. ಸಾಮಾನ್ಯ ನೈರ್ಮಲ್ಯ ಮತ್ತು ಸಾಮಾಜಿಕ ಕಳಕಳಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಈಗಾಗಲೇ ಮೊಬೈಲ್ ಕಾಲರ್ ಟ್ಯೂನ್ ಗಳಲ್ಲಿ ಜಾಗೃತಿ ಸಂದೇಶವನ್ನು ಸಾರಲಾಗುತ್ತಿದ್ದು, ಎಲ್ಲ ಭಾಷೆಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕೆಲಸಗಳು ಆಗಬೇಕು.

English summary
Coronavirus: India How Fight Against 1918th Bombay Flu Also Matter, Why? Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X