Mount Everest: ಮೌಂಟ್ ಎವರೆಸ್ಟ್ ಶಿಖರ ಏರಿ ತಮ್ಮದೇ ಹಳೆಯ ವಿಶ್ವ ದಾಖಲೆಗಳನ್ನು ಮುರಿದ ಇಬ್ಬರು ನೇಪಾಳಿಗರು

ವಿಶ್ವದ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಎವರೆಸ್ಟ್ (Mount Everest) ಅನ್ನು ಯಶಸ್ವಿಯಾಗಿ ಏರುವ ಮೂಲಕ ನೇಪಾಳದ ಇಬ್ಬರು ಪ್ರಸಿದ್ಧ ಗೈಡ್‌ಗಳು (ಶರ್ಪಾಗಳು) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇವರಲ್ಲಿ ಒಬ್ಬರು ತಮ್ಮದೇ ಹಳೆಯ ದಾಖಲೆಯನ್ನು ಮುರಿದು ಬರೋಬ್ಬರಿ 32ನೇ ಬಾರಿಗೆ ಎವರೆಸ್ಟ್ ಶಿಖರ ಮುಟ್ಟಿದರೆ, ಮತ್ತೊಬ್ಬ ಮಹಿಳಾ ಗೈಡ್ 11ನೇ ಬಾರಿ ಜಗತ್ತಿನ ಅತಿ ಎತ್ತರದ ಶಿಖರವೇರಿ ಮಹಿಳೆಯರ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. "ಇದು ನೇಪಾಳದ ಪರ್ವತಾರೋಹಣ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಮೈಲಿಗಲ್ಲು" ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆಯ ವಕ್ತಾರರಾದ ಹಿಮಾಲ್ ಗೌತಮ್ ಅವರು ಭಾನುವಾರ ತಿಳಿಸಿದ್ದಾರೆ.

ಕಾಮಿ ರಿಟಾ ಶರ್ಪಾ

ಪರ್ವತಾರೋಹಣ ವಲಯದಲ್ಲಿ 'ಎವರೆಸ್ಟ್ ಮ್ಯಾನ್' ಎಂದೇ ಖ್ಯಾತರಾಗಿರುವ 56 ವರ್ಷದ ಕಾಮಿ ರಿಟಾ ಶರ್ಪಾ, ಕಳೆದ ವರ್ಷ ತಾವು ಬರೆದಿದ್ದ ದಾಖಲೆಯನ್ನು ತಾವೇ ಬ್ರೇಕ್ ಮಾಡಿದ್ದಾರೆ. 1994ರಲ್ಲಿ ಕಮರ್ಷಿಯಲ್ ಎಕ್ಸ್‌ಪೆಡಿಶನ್ ಒಂದರಲ್ಲಿ ಗೈಡ್ ಆಗಿ ಕೆಲಸ ಮಾಡುವಾಗ ಮೊದಲ ಬಾರಿಗೆ ಎವರೆಸ್ಟ್ ತುದಿಯಲ್ಲಿ ನಿಂತಿದ್ದ ಇವರು, ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷವೂ ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುತ್ತಾ ಎವರೆಸ್ಟ್ ಏರುತ್ತಿದ್ದಾರೆ. ಕೆಲವು ವರ್ಷಗಳಲ್ಲಂತೂ ಇವರು ಒಂದೇ ವರ್ಷದಲ್ಲಿ ಎರಡು ಬಾರಿ ಎವರೆಸ್ಟ್ ಮುಟ್ಟಿ ಜಗತ್ತನ್ನೇ ಬೆರಗುಗೊಳಿಸಿದ್ದಾರೆ.

Mount Everest

ಲಕ್ಪಾ ಶರ್ಪಾ

'ಮೌಂಟೇನ್ ಕ್ವೀನ್' ಎಂದೇ ಕರೆಯಲ್ಪಡುವ 52 ವರ್ಷದ ಲಕ್ಪಾ ಶರ್ಪಾ ಅವರು 11ನೇ ಬಾರಿಗೆ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿ, ಇಳಿಯುವ ಮೂಲಕ ಮಹಿಳಾ ವಿಭಾಗದಲ್ಲಿ ತಮ್ಮದೇ ಆದ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಇವರು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಎವರೆಸ್ಟ್ ತುತ್ತತುದಿ ತಲುಪಿದ ನೇಪಾಳದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

Cash: ಎರ್ಟಿಗಾ ಕಾರ್‌ನಲ್ಲಿ ಸಿಕ್ಕಿತು ಬರೋಬ್ಬರಿ ₹2.56 ಕೋಟಿ ಕಂತೆ ಕಂತೆ ಹಣ: ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
Cash: ಎರ್ಟಿಗಾ ಕಾರ್‌ನಲ್ಲಿ ಸಿಕ್ಕಿತು ಬರೋಬ್ಬರಿ ₹2.56 ಕೋಟಿ ಕಂತೆ ಕಂತೆ ಹಣ: ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

ಹೆಚ್ಚುತ್ತಿರುವ ಎವರೆಸ್ಟ್ ಕ್ರೇಜ್

ನೇಪಾಳ ಸರ್ಕಾರವು ಈ ವರ್ಷದ ಮಾರ್ಚ್‌ನಿಂದ ಮೇ ತಿಂಗಳವರೆಗಿನ ಪರ್ವತಾರೋಹಣ ಸೀಸನ್‌ಗಾಗಿ ದಾಖಲೆಯ 492 ಎವರೆಸ್ಟ್ ಪರ್ಮಿಟ್‌ಗಳನ್ನು (ಅನುಮತಿ ಪತ್ರ) ನೀಡಿದೆ. 1953ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್‌ಸಿಂಗ್ ನೋರ್ಗೆ ಅವರು ಮೊದಲ ಬಾರಿಗೆ ಎವರೆಸ್ಟ್ ಮುಟ್ಟಿದ ನಂತರ, ಇದುವರೆಗೆ ಬರೋಬ್ಬರಿ 8,000ಕ್ಕೂ ಹೆಚ್ಚು ಜನ ಈ ಸಾಹಸವನ್ನು ಮಾಡಿದ್ದಾರೆ. ಅವರಲ್ಲಿ ಅನೇಕರು ಹತ್ತಾರು ಬಾರಿ ಈ ಸಾಧನೆಯನ್ನು ಪುನರಾವರ್ತಿಸಿದ್ದಾರೆ.

ಶರ್ಪಾಗಳನ್ನು ಹೊರತುಪಡಿಸಿದರೆ (ನಾನ್-ಶರ್ಪಾ ವಿಭಾಗ), ಬ್ರಿಟಿಷ್ ಗೈಡ್ ಆದ ಕೆಂಟನ್ ಕೂಲ್ 19 ಬಾರಿ ಎವರೆಸ್ಟ್ ಏರಿ ಅತಿ ಹೆಚ್ಚು ಬಾರಿ ಶಿಖರ ತಲುಪಿದ ವಿದೇಶಿ ಎಂಬ ದಾಖಲೆ ಹೊಂದಿದ್ದಾರೆ. ಇವರ ಬೆನ್ನಲ್ಲೇ ಅಮೆರಿಕದ ಡೇವ್ ಹಾನ್ ಮತ್ತು ಗ್ಯಾರೆಟ್ ಮ್ಯಾಡಿಸನ್ ತಲಾ 15 ಬಾರಿ ಈ ಸಾಹಸ ಮಾಡಿದ್ದಾರೆ. ಪ್ರಸ್ತುತ ಕೆಂಟನ್ ಕೂಲ್ ಮತ್ತು ಮ್ಯಾಡಿಸನ್ ಇಬ್ಬರೂ ತಮ್ಮದೇ ಹಳೆಯ ದಾಖಲೆಗಳನ್ನು ಉತ್ತಮಪಡಿಸಿಕೊಳ್ಳಲು ಸದ್ಯ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+