RCB: ಐಪಿಎಲ್‌ನಲ್ಲಿ ಹೊಸ ಟ್ರೆಂಡ್: ತಮಿಳು ನಟ, ಸಿಎಂ ವಿಜಯ್ ಸ್ಟೈಲ್‌ ಅನುಕರಿಸಿ ವೈರಲ್‌ ಆದ ಆರ್‌ಸಿಬಿ ಸ್ಟಾರ್ ವೆಂಕಿ

Venkatesh Iyer: ಧರ್ಮಶಾಲಾದಲ್ಲಿ ಭಾನುವಾರ (ಮೇ 17) ನಡದ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಅವರು ಗಳಿಸಿದ ರನ್‌ಗಳಿಗಿಂತಲೂ ಹೆಚ್ಚಾಗಿ ಅವರ ಅರ್ಧಶತಕದ ಸಂಭ್ರಮಾಚರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಸ್ಫೋಟ ಬ್ಯಾಟಿಂಗ್ ಪ್ರದರ್ಶನ ಮಾಡಿದ ವೆಂಕಟೇಶ್ ಅಯ್ಯರ್ ಅವರು ತಮಿಳು ಚಿತ್ರರಂಗದ ನಟ ದಳಪತಿ ವಿಜಯ್ ಅವರ ಇತ್ತೀಚಿನ ಚಿತ್ರವೊಂದರ ಐಕಾನಿಕ್ ಸ್ಟೈಲ್‌ ಅನುಕರಿಸುವ ಮೂಲಕ ತಮ್ಮ ಅರ್ಧಶತಕದ ಸಂಭ್ರಮವನ್ನು ಆಚರಿಸಿದರು. ವಿಜಯ್ ಅವರು ತಮ್ಮ ಬಹುತೇಕ ಸಿನಿಮಾಗಳಲ್ಲಿ ತೋರಿಸಿರುವ ಈ ಪೋಸ್ ಕ್ರೇಜ್ ಈಗ ಐಪಿಎಲ್ ಮೈದಾನಕ್ಕೂ ವ್ಯಾಪಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ.

RCB Venkatesh Iyer s Vijay Style Celebration Goes Viral After Stunning Fifty vs PBKS in IPL 2026

ವಿಜಯ್ ಅಭಿಮಾನಿಗಳ ಮನಗೆದ್ದ ಅಯ್ಯರ್

ವೆಂಕಟೇಶ್ ಅಯ್ಯರ್ ಅಜೇಯ 73 ರನ್ ಗಳಿಸುವ ಮೂಲಕ ಆರ್‌ಸಿಬಿ ತಂಡವು 222 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಲು ನೆರವಾದರು. ಅಯ್ಯರ್ ಅವರ ಈ ಸೆಲೆಬ್ರೆಷನ್ ಕಂಡ ತಮಿಳುನಾಡು ಮತ್ತು ಕರ್ನಾಟಕದಲ್ಲಿನ ವಿಜಯ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪಂದ್ಯದ ನಂತರ ವೆಂಕಟೇಶ್ ಅಯ್ಯರ್ ಅವರ ಈ ಸಂಭ್ರಮಾಚರಣೆಯ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವಿಜಯ್ ಸ್ಟೈಲ್‌ ಕ್ರಿಕೆಟ್ ಮೈದಾನದವರೆಗೂ ಬಂದಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹೊಸ ಟ್ರೆಂಡ್ ಸೃಷ್ಟಿಸಿದ ವೆಂಕಟೇಶ್‌ ಅಯ್ಯರ್

ವೆಂಕಟೇಶ್ ಅಯ್ಯರ್ ಈ ಹಿಂದೆಯೂ ಸಿನಿಮಾ ತಾರೆಯರ ಅಭಿಮಾನಿಯಾಗಿದ್ದು, ಮೈದಾನದಲ್ಲಿ ಇಂತಹ ವಿಭಿನ್ನ ಶೈಲಿಗಳನ್ನು ಪ್ರದರ್ಶಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಬಾರಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ವಿಜಯ್ ಅವರಿಗೆ ಗೌರವ ಸಲ್ಲಿಸುವ ಮೂಲಕ ಅವರು ಸಿನಿಮಾ ಪ್ರೇಮಿಗಳ ಮನ ಗೆದ್ದಿದ್ದಾರೆ. ಆರ್‌ಸಿಬಿ ಬ್ಯಾಟರ್ ವೆಂಕಟೇಶ್ ಅಯ್ಯರ್ ಕೇವಲ ಬ್ಯಾಟಿಂಗ್‌ನಿಂದ ಮಾತ್ರವಲ್ಲದೆ, ನಟ ವಿಜಯ್ ಶೈಲಿಯ ಸಂಭ್ರಮಾಚರಣೆಯ ಮೂಲಕ ಐಪಿಎಲ್ 2026ರಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.

ಪಂಜಾಬ್‌ಗೆ ಕಠಿಣ ಗುರಿ ನೀಡಿದ ಆರ್‌ಸಿಬಿ

ಈ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ. ಆರ್‌ಸಿಬಿ ಪರ ಸ್ಫೋಟಕ ಬ್ಯಾಟಿಂಗ್ ಆಡಿದ ವೆಂಕಟೇಶ್ ಅಯ್ಯರ್ 73 ರನ್ ಗಳಿಸಿ ಅಜೇಯರಾಗಿ ಉಳಿದರು. ಟಾಸ್‌ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಪಂಜಾಬ್ ಕಿಂಗ್ಸ್‌ಗೆ 223 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ಕೊನೆಗೂ ಈ ಗುರಿ ತಲುಪಲು ಸಾಧ್ಯವಾಗದೆ ಪಂಜಾಬ್ ಹೀನಾಯ ಸೋಲು ಕಂಡಿದ್ದು, ಆರ್‌ಸಿಬಿ ಪ್ಲೇಆಫ್‌ ಪ್ರವೇಶ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+