ಸೋನಿಯಾ ಗಾಂಧಿ ಲೆಕ್ಕದಲ್ಲಿ ತುಂಬಾ ವೀಕು : ಅನಂತ್ ಕುಮಾರ್ ಜೋಕು

Recommended Video

      Parliament Monsoon session 2018 : ಸೋನಿಯಾ ಗಾಂಧಿಯನ್ನ ಲೇವಡಿ ಮಾಡಿದ ಅನಂತ್ ಕುಮಾರ್

      ನವದೆಹಲಿ, ಜುಲೈ 19: 'ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗಣಿತದಲ್ಲಿ ವೀಕು. ಅವರು 1996 ರಲ್ಲಿ ಲೆಕ್ಕ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ' ಎಂದು ಕೇಂದ್ರ ಸಚಿವ ಅನಂತ ಕುಮಾರ್ ಲೇವಡಿ ಮಾಡಿದ್ದಾರೆ.

      ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, 'ಮೋದಿ ಸರ್ಕಾರದ ಬಳಿ ಸಂಖ್ಯಾಬಲವಿದೆ, ಬಹುಮತವೂ ಇದೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಎರಡೂ ಕಡೆ ನಮ್ಮಲ್ಲಿ ಬಹುಮತವಿದೆ. ಎನ್ ಡಿಎ ಮೈತ್ರಿಕೂಟ ಅವಿಶ್ವಾಸ ಗೊತ್ತುವಳಿಯ ವಿರುದ್ಧ ಮತ ಚಲಾಯಿಸಲಿದೆ. ಎನ್ ಡಿಎಯ ಇತರ ಮೈತ್ರಿ ಪಕ್ಷಗಳು ನಮ್ಮನ್ನು ಬೆಂಬಲಿಸಲಿವೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

      "ಸೋನಿಯಾ ಗಾಂಧಿ ಅವರ ಗಣಿತ ತಪ್ಪಾಗಿದೆ. 1996 ರಲ್ಲಿ ಲೆಕ್ಕ ಮಾಡಿದಂತೇ ಈಗಲೂ ಮಾಡುತ್ತಿದ್ದಾರೆ. ಆಗ ಏನಾಯಿತೆಂದು ನಮಗೆಲ್ಲಾ ಗೊತ್ತು. ಅವರ ಲೆಕ್ಕ ಮತ್ತೆ ತಪ್ಪಾಗಲಿದೆ" ಎಂದು ಅನಂತ ಕುಮಾರ್ ಹೇಳಿದ್ದಾರೆ.

      Monsoon Session 2018: Sonia Gandhis maths is week says Anant Kumar

      ಜು.18 ರಿಂದ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್ 10ರವರೆಗೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಇತರ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಜು.20 ರಂದು ಮಂಡಿಸಲಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+