ವಿಶ್ವದ ಬೃಹತ್ ರಕ್ಷಣಾ ವ್ಯವಹಾರಕ್ಕೆ ಚುರುಕು ನೀಡಿದ ಮೋದಿ ಸರ್ಕಾರ

ನವದೆಹಲಿ, ಜುಲೈ 5:ವಿಶ್ವದ ಅತಿ ದೊಡ್ಡ ರಕ್ಷಣಾ ವ್ಯವಹಾರಕ್ಕೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ. ಒಂದು ಲಕ್ಷ ಕೋಟಿ ರೂಗಳಿಗೂ ಅಧಿಕ ಮೊತ್ತದ 114 ಯುದ್ಧ ವಿಮಾನ ಖರೀದಿ ಪ್ರಕ್ರಿಯೆಗೆ ಚುರುಕು ದೊರೆತಿದೆ.

ಭಾರತದ ವಾಯುಸೇನೆ ಹಾಗೂ ನೌಕಾದಳಕ್ಕೆ ಸುಮಾರು 400 ಯುದ್ಧ ವಿಮಾನಗಳ ಅಗತ್ಯವಿದೆ. ಆದರೆ ರಫೇಲ್‌ನಿಂದ ಕೇವಲ 36 ಯುದ್ಧ ವಿಮಾನಗಳು ಸಿಗುತ್ತಿವೆ.

ಉಳಿದಂತೆ ಎಚ್‌ಎಎಲ್ ನಿರ್ಮಿಸುವ ತೇಜಸ್ ಹಾಗೂ ಸುಖೋಯ್ ಮೂಲಕ 160ಕ್ಕೂ ಅಧಿಕ ವಿಮಾನಗಳ ಬೇಡಿಕೆ ಈಡೇರಲಿದೆ. ಆದಾಗ್ಯೂ ಮತ್ತೆ 100 ವಿಮಾನಗಳ ಕೊರತೆ ಬೀಳಲಿವೆ.

Modi government started process to buy 114 combat aircraft
ಶೀಘ್ರದಲ್ಲಿ 114 ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು ಎಂದು ಲೋಕಸಭೆಗೆ ಕೇಂದ್ರ ರಕ್ಷಣಾ ಇಲಾಖೆ ಆರ್ಜಯ ಸಚಿವ ಶ್ರೀಪಾದ್ ನಾಯ್ಕ ತಿಳಿಸಿದ್ದಾರೆ.

ಆದರೆ ಪಾಕಿಸ್ತಾನ ಹಾಗೂ ಚೀನಾದಂಥ ನೆರೆಹೊರೆಯ ರಾಷ್ಟ್ರಗಳಿರುವಾಗ ಪ್ರಬಲ ಯುದ್ಧ ವಿಮಾನ ಹೊಂದಿರುವುದು ಭಾರತಕ್ಕೆ ಸವಾಲಿನ ವಿಚಾರವಾಗಲಿದೆ. ಹೀಗಾಗಿ ಶೀಘ್ರದಲ್ಲೇ 114 ವಿಮಾನಗಳ ಖರೀದಿ ಅಂತಿಮವಾಗಲಿದೆ.

ಒದು ಲಕ್ಷ ಕೋಟಿ ರುಗೂ ಅಧಿಕ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಭಾರತ ಹೊಸದೊಂದು ಷರತ್ತು ಹಾಕಿದ್ದು, ಶೇ.85ವಿಮಾನಗಳ ಉತ್ಪಾದನೆ ಭಾರತದಲ್ಲೇ ಆಗಬೇಕು ಎಂದು ಸೂಚಿಸಲಾಗಿದೆ.
ಎಫ್-21 ಯುದ್ಧ ವಿಮಾನ ಖರೀದಿಗೆ ಅನುಮತಿ ದೊರೆತರೆ ಟಾಟಾ ಗ್ರೂಪ್ ಜೊತೆ ಸೇರಿ ವಿಮಾನ ಉತ್ಪಾದನೆ ಮಾಡಲಾಗುತ್ತದೆ.

ಎಚ್‌ಎಎಲ್ ಹಾಗೂ ಮಹೀಂದ್ರಾ ಜೊತೆಗೆ ಬೋಯಿಂಗ್ ಒಪ್ಪಂದ ಮಾಡಿಕೊಂಡಿದ್ದು, ಎಫ್/ಎ-18 ಯುದ್ಧ ವಿಮಾನ ಉತ್ಪಾದನೆಗೆ ಆಸಕ್ತಿ ತೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+