ಸಹೋದ್ಯೋಗಿಗೆ ಮತ್ತು ಬರಿಸುವ ಪಾನೀಯ ಕೊಟ್ಟು ಸಾಮೂಹಿಕ ಅತ್ಯಾಚಾರ

ನವದೆಹಲಿ, ಅಕ್ಟೋಬರ್ 15: ಪಶ್ಚಿಮ ದೆಹಲಿಯ ದ್ವಾರಕದಲ್ಲಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬರ ಮೇಲೆ ಸಹೋದ್ಯೋಗಿಗಳೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಪ್ಪತ್ತೈದು ವರ್ಷದ ಬಿರ್ಜು ಹಾಗೂ ವಿನೋದ್ ಕುಮಾರ್ ಅತ್ಯಾಚಾರ ಆರೋಪಿಗಳು.

ಕಚೇರಿ ಅವಧಿ ಮುಗಿದ ನಂತರ ಆಕೆಯನ್ನು ಮನೆಗೆ ಬಿಡುವುದಾಗಿ ಕರೆದೊಯ್ದಿದ್ದಾರೆ. ದಾರಿ ಮಧ್ಯೆ ಆಕೆಗೆ ಮತ್ತು ಬರಿಸುವ ಔಷಧ ಹಾಕಿದ ತಂಪು ಪಾನೀಯ ನೀಡಿದ್ದಾರೆ. ಅದನ್ನು ಕುಡಿದ ನಂತರ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆಯನ್ನು ಫ್ಲ್ಯಾಟ್ ಗೆ ಹೊತ್ತೊಯ್ದ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಆ ನಂತರ ಮಹಿಳೆಯನ್ನು ದಕ್ಷಿಣ ದೆಹಲಿಯ ವಸಂತ್ ಕುಂಜ್ ಬಳಿ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

MNC employee gang raped allegedly by colleagues in Delhi, 2 arrested

ಸಂತ್ರಸ್ತೆಯು ತನ್ನ ಮನೆಯನ್ನು ತಲುಪಿದ ನಂತರ ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ಕೆಲ ಗಂಟೆಗಳ ನಂತರ ಆಸ್ಪತ್ರೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. "ಆಕೆಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಅತ್ಯಾಚಾರ ಆಗಿರುವುದು ಸಾಬೀತಾಗಿದ್ದರಿಂದ ಆರೋಪಿಗಳನ್ನು ಬಂಧಿಸಿದ್ದೇವೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+