ಕಿರುಕುಳ ಕೇಸ್ : ಮಿಥುನ್ ಚಕ್ರವರ್ತಿ ಮಗನ ಮದ್ವೆ ಮುರಿದು ಬಿತ್ತು!

ಬೆಂಗಳೂರು, ಜುಲೈ 08: ಲವ್, ಸೆಕ್ಸ್, ದೋಖಾ ಆರೋಪ ಹೊತ್ತುಕೊಂಡಿದ್ದ ಹಿಂದಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯ ಅವರ ಮದುವೆ ಮುರಿದು ಬಿದ್ದಿದೆ. ಕಳೆದ ವಾರದಲ್ಲಿ ಮಹಾಕ್ಷಯ್ ಮದುವೆ ನಡೆಯಲು ಮುಹೂರ್ತ ನಿಗದಿಯಾಗಿತ್ತು. ಆದರೆ, ಆತ್ಯಾಚಾರ, ವಂಚನೆ ಪ್ರಕರಣದಲ್ಲಿ ಸಿಲುಕಿದ ನಂತರ ಹೆಣ್ಣಿನ ಮನೆ ಕಡೆಯವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ.

ಮಹಾಕ್ಷಯ ವಿರುದ್ಧ ಅತ್ಯಾಚಾರ, ಮೋಸ, ಬಲವಂತವಾಗಿ ಗರ್ಭಪಾತ ಮಾಡಿಸಿದ ಆರೋಪ ಕೇಳಿ ಬಂದಿದ್ದು, ಮಹಾಕ್ಷಯ್ ಅವರ ತಾಯಿ ಯೋಗಿತಾ ಬಾಲಿ ಅವರ ಮೇಲೆ ದುಷ್ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪವಿದೆ. ಸದ್ಯ ಇಬ್ಬರಿಗೂ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

Mithun Chakrabortys Wife, Son Get Anticipatory Bail In Rape Case

ದೆಹಲಿಯ ರೋಹಿಣಿ ಕೋರ್ಟ್ ಮಹಾಕ್ಷಯ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಆದೇಶ ಮಾಡಿತ್ತು. ಮಿಥುನ್ ಪತ್ನಿ ಯೋಗಿತಾ ವಿರುದ್ಧ ಮಗನಿಗೆ ಬೆಂಬಲ ನೀಡಿದ್ದಕ್ಕೆ ಸಹ ಆರೋಪಿಯೆಂದು ದೂರು ದಾಖಲಿಸಿಕೊಳ್ಳಲಾಗಿದೆ.

ಒಂದು ಲಕ್ಷ ರು ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು, ನಿರೀಕ್ಷಣಾ ಜಾಮೀನು ನೀಡಿ ವಿಶೇಷ ಜಡ್ಜ್ ಆಶುತೋಷ್ ಕುಮಾರ್ ಅವರು ಆದೇಶ ನೀಡಿದ್ದಾರೆ.

ತಮಿಳುನಾಡಿನ ನೀಲಗಿರೀಶ್ ಜಿಲ್ಲೆಯ ಉದಕಮಂಡಲಂ(ಊಟಿ)ನಲ್ಲಿ ಮಹಾಕ್ಷಯ್ ಮದುವೆ(ಜುಲೈ 07) ನಿಗದಿಯಾಗಿತ್ತು. ಮಹಾಕ್ಷಯ್ ಕೂಡಾ ಈ ಹಿಂದೆ ಲೂಟ್, ಜಿಮ್ಮಿ, ಎನೆಮ್ಮಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ನಿರ್ಮಾಪಕ ಸುಭಾಷ್ ಶರ್ಮಾ, ಮಾಜಿ ನಟಿ ಶೀಲಾ ಶರ್ಮ ಮಗಳು ಮದಾಲಸಾ ಜೊತೆ ವಿವಾಹವಾಗಬೇಕಿತ್ತು. ಆದರೆ, ಯುವತಿಯೊಬ್ಬಳ ದೂರಿನಿಂದ ಈ ಮದುವೆ ಮುರಿದು ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+