ಆಗ್ರಾ ಸುತ್ತ ಸಂಜೆ ಸಂಚರಿಸುವಾಗ ಸ್ಕರ್ಟ್ ಧರಿಸಬೇಡಿ

ದೆಹಲಿ, ಆಗಸ್ಟ್ 29: ಆಗ್ರಾ ಸುತ್ತ ಮುತ್ತ ಸಂಜೆ ವೇಳೆ ಓಡಾಡುವಾಗ ಮಹಿಳಾ ಪ್ರವಾಸಿಗರು ಶಾರ್ಟ್ ಸ್ಕರ್ಟ್ ನಂಥದ್ದನ್ನು ಹಾಕಿಕೊಳ್ಳಬೇಡಿ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳು ಸಚಿವರ ಸ್ಪಷ್ಟನೆ ಕೇಳಿದಾಗ ಮಾತು ಬದಲಿಸಿದ ಮಹೇಶ್ ಶರ್ಮಾ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಎಂದು ನಾನು ಹೇಳಿದ್ದೆ. ನನ್ನ ಮಾತಿನ ಅರ್ಥ ಬೇರೆಯದಾಗಿತ್ತು ಎಂದಿದ್ದಾರೆ.

'ಪ್ರವಾಸಿಗರು ಏರ್ ಪೋರ್ಟ್ ಗೆ ಬಂದಾಗ ಅವರಿಗೊಂದು ವೆಲ್ ಕಂ ಕಿಟ್ ಕೊಡಲಾಗುತ್ತೆ. ಅದರೊಳಗೆ, ಇಲ್ಲಿ ಹೇಗಿರಬೇಕು, ಏನು ಮಾಡಬಹುದು-ಮಾಡಬಾರದು ಎಂಬೆಲ್ಲ ಡೀಟೇಲ್ಸ್ ಇರುವ ಕಾರ್ಡ್, ಪಾಂಪ್ಲೆಟ್ ಇರುತ್ತದೆ. ಅದರೊಳಗೆ ರಾತ್ರಿ ವೇಳೆ ಪ್ರಯಾಣ ಮಾಡಬೇಡಿ, ಸ್ಕರ್ಟ್ ನಂಥದ್ದನ್ನು ಧರಿಸಬೇಡಿ' ಅಂತಲೂ ಇರುತ್ತದೆ ಎಂದು ಮಹೇಶ್ ಶರ್ಮಾ ಹೇಳಿದ್ದಾರೆ.[ಸೆಲ್ಫಿ ತೆಗೆದುಕೊಳ್ಳುವಾಗ ಹೃದಯಾಘಾತವಾಗಿ ಪ್ರಾಣಬಿಟ್ಟ!]

Minister retracts after advising not to wear mini skirts in Agra

ವೆಲ್ ಕಂ ಕಿಟ್ ನಲ್ಲಿರುವ ಪಾಂಪ್ಲೆಟ್ ನಲ್ಲಿ, 'ಭಾರತ ಸಾಂಸ್ಕೃತಿಕ ದೇಶ. ದೇವಸ್ಥಾನದಂಥ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವಾಗ ಅಲ್ಲಿಗೆ ಸರಿಯಾದ ಗೌರವ ನೀಡಬೇಕು. ಆದ್ದರಿಂದ ಪ್ರವಾಸಿಗರು ತಾವು ಧರಿಸುವ ಬಟ್ಟೆಗಳ ಬಗ್ಗೆ ನಿಗಾ ವಹಿಸಬೇಕು ಎಂದಿದ್ದಾರೆ ಮಹೇಶ್.[ಪುಢಾರಿಯ ಗಾರ್ಡ್ ಕಣ್ಣು ಹೊಡೆದಿದ್ದಕ್ಕೆ ಯುವತಿ ಪ್ರತಿಭಟನೆ]

ಪ್ರವಾಸಿಗರು ಮುಂಜಾಗ್ರತಾ ಕ್ರಮವಾಗಿ ಸಂಚರಿಸುವ ವಾಹನಗಳ ನಂಬರ್ ಪ್ಲೇಟ್ ಗಳ ಫೋಟೋ ತೆಗೆದುಕೊಳ್ಳಬೇಕು ಅಂತಲೂ ಕೇಂದ್ರ ಸಚಿವರು ಹೇಳಿದ್ದಾರೆ. 'ರಾತ್ರಿ ವೇಳೆ ಹೆಣ್ಣುಮಕ್ಕಳು ಹೊರಗೆ ಓಡಾಡುವುದನ್ನು ಭಾರತದಲ್ಲಿ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ' ಎಂಬ ಹೇಳಿಕೆ ನೀಡುವ ಮೂಲಕ ಕಳೆದ ವರ್ಷ ಶರ್ಮಾ ಚರ್ಚೆಗೆ ನಾಂದಿ ಹಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+