ಜೂನ್ 30ರ ರಾತ್ರಿ ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್ ಟಿಗೆ ಚಾಲನೆ

ನವದೆಹಲಿ, ಜೂನ್ 20: ಜೂನ್ ಮೂವತ್ತರಂದು ಜಿಎಸ್ ಟಿ ಜಾರಿಯ ಐತಿಹಾಸಿಕ ಕ್ಷಣಗಳಿಗೆ ಸಂಸತ್ ನ ಸೆಂಟ್ರಲ್ ಹಾಲ್ ಸಾಕ್ಷಿಯಾಗಲಿದೆ. ರಾತ್ರಿ ಹನ್ನೊಂದರಿಂದ ಹನ್ನೆರಡೂ ಹತ್ತರ ಮಧ್ಯೆ ಜಿಎಸ್ ಟಿಗೆ ಚಾಲನೆ ದೊರೆಯಲಿದೆ. ಅದರ ಮರುದಿನ ಅಂದರೆ ಜುಲೈ ಒಂದರಂದು ದೇಶದಾದ್ಯಂತ ಜಿಎಸ್ ಟಿ ಜಾರಿಯಾಗಲಿದೆ.

ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಕಾರ್ಯಕ್ರಮವೊಂದಕ್ಕೆ ಸೆಂಟ್ರಲ್ ಹಾಲ್ ಬಳಕೆಯಾಗುತ್ತಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ.

Midnight event at Parliament to mark GST rollout

ಇದೇ ಸಂದರ್ಭದಲ್ಲಿ ಒಂದು ಗಂಟೆ ಅವಧಿಯ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಆದರೆ ಸರಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ ಬಂದಿಲ್ಲ. ಆದರೆ ಸೆಂಟ್ರಲ್ ಹಾಲ್ ನಲ್ಲಿ ಎಲ್ಲ ಸಿದ್ಧತೆ ನಡೆಯುತ್ತಿದೆ. ಅಂದಹಾಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಈ ಸಂದರ್ಭ ತುಂಬ ವಿಶೇಷವಾದದ್ದು.

ಏಕೆಂದರೆ, ಜಿಎಸ್ ಟಿ ಜಾರಿಯ ಆಲೋಚನೆಯ ಮೂಲ ಬಿತ್ತಿದ್ದು ಇದೇ ಪ್ರಣವ್ ಮುಖರ್ಜಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ. ಈ ಹಿಂದೆ ಯುಪಿ ಸರಕಾರ ಅಧಿಕಾರದಲ್ಲಿದ್ದಾಗ ಮುಖರ್ಜಿ ಹಣಕಾಸು ಸಚಿವರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+