'ಸ್ಫೂರ್ತಿದಾಯಕ': ದೆಹಲಿ ಸರ್ಕಾರಿ ಶಾಲೆಯನ್ನು ಹಾಡಿ ಹೊಗಳಿದ ಮೆಲಾನಿಯಾ ಟ್ರಂಪ್

ನವದೆಹಲಿ, ಫೆಬ್ರವರಿ 25: ದಕ್ಷಿಣ ದೆಹಲಿ ಸರ್ಕಾರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ ಅಮೆರಿಕ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್, ನಾನಕಪುರದಲ್ಲಿನ ಸರ್ವೋದಯ ಸಹಶಿಕ್ಷಣ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

'ನಮಸ್ತೆ! ಇದು ಸುಂದರವಾದ ಶಾಲೆ' ಎಂದು ಹೇಳಿದ ಅವರು, ಶಾಲೆಯಲ್ಲಿನ ಆನಂದದ ಪಠ್ಯ ಯೋಜನೆಯು ಸ್ಫೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದರು. ಸಾಂಪ್ರದಾಯಿಕ ನೃತ್ಯ ಪ್ರದರ್ಶನದಿಂದ ತಮ್ಮನ್ನು ಸ್ವಾಗತಿಸಿದ್ದಕ್ಕೆ ಮುದಗೊಂಡರು.

'ಇದು ನನ್ನ ಮೊದಲ ಭಾರತ ಭೇಟಿ. ಇಲ್ಲಿನ ಜನರು ಸ್ನೇಹಪರರು. ಅಮೆರಿಕದಲ್ಲಿಯೂ ನಾನು ಇದೇ ರೀತಿಯ ಯೋಜನೆಯೊಂದಿಗೆ ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ 'ಬಿ ಬೆಸ್ಟ್' ಎಂದು ಹೆಸರಿಟ್ಟಿದ್ದೇನೆ. ಇದು ಮಾದಕ ವಸ್ತು ಸೇವನೆಯ ಅಪಾಯ, ಅಂತರ್ಜಾಲ ಸುರಕ್ಷತೆಯ ಮಹತ್ವ ಮತ್ತು ಒಟ್ಟಾರೆ ಮಕ್ಕಳ ಬೆಳವಣಿಗೆಯ ಮೂರು ಸ್ತಂಭಗಳನ್ನು ಒಳಗೊಂಡಿದೆ' ಎಂದರು.

Melania Trump Praises Delhi Government Schools Happiness Class

'ವಿದ್ಯಾರ್ಥಿಗಳು ಸಾವಧಾನತೆಯನ್ನು ಬೆಳೆಸಿಕೊಳ್ಳುವ ಹಾಗೂ ಪ್ರಕೃತಿಯೊಂದಿಗೆ ಸಂಪರ್ಕಿಸಿಕೊಳ್ಳುವ ಮೂಲಕ ತಮ್ಮ ದಿನವನ್ನು ಆರಂಭಿಸುವುದು ಸ್ಫೂರ್ತಿದಾಯಕವಾಗಿದೆ. ಭರವಸೆಯ ಭವಿಷ್ಯವನ್ನು ಈ ಮೂಲಕ ಖಚಿತಪಡಿಸಿಕೊಳ್ಳಲು ಶಿಕ್ಷಣ ತಜ್ಞರಿಗೆ ಇದು ಆರೋಗ್ಯದಾಯಕ ಮತ್ತು ಸಕಾರಾತ್ಮಕ ಉದಾಹರಣೆಯಾಗಿದೆ' ಎಂದು ಹೇಳಿದರು.

ಈ ಆನಂದದ ತರಗತಿ ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಶಾಲೆಗಳಲ್ಲಿ ನಡೆಯಬೇಕು ಎಂದು ಮೆಲಾನಿಯಾ ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಿದ ಮಕ್ಕಳು ಅವರಿಗೆ ತಾವೇ ರಚಿಸಿದ ಮಧುಬನಿ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಮಕ್ಕಳು ಹಾಗೂ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದಿಸಿದರು.

ವೇದಿಕೆ ಮೇಲಿನ ನೃತ್ಯದ ವೇಳೆ ಕೆಳಗೆ ಕುಳಿತಿದ್ದ ಪುಟಾಣಿ ಮಕ್ಕಳು ಎದ್ದು ನಿಂತು ಪಂಜಾಬಿ ಶೈಲಿಯ ಬಾಂಗ್ರಾ ನೃತ್ಯ ಮಾಡಿದ್ದನ್ನು ಮೆಲಾನಿಯಾ ಆನಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+