• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಭಿನಂದನ್ ವೈದ್ಯಕೀಯ ವರದಿ: ಬೆನ್ನುಮೂಳೆಗೆ ಪೆಟ್ಟು

|
   ಅಭಿ ಬೆನ್ನು ಮೂಳೆಗೆ ಪೆಟ್ಟು ಬಿದ್ದಿದೆ..! | Oneindia Kannada

   ನವದೆಹಲಿ, ಮಾರ್ಚ್ 04: ವಿಂಗ್ ಕಮಾಂಡರ್ ಅಭಿನಂದನ್ ಅವರ ವೈದ್ಯಕೀಯ ವರದಿ ಹೊರಬಿದ್ದಿದ್ದು, ಅವರ ಬೆನ್ನುಮೂಳೆಗೆ ಮತ್ತು ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ ಎಂದು ವರದಿ ತಿಳಿಸಿದೆ.

   ಶತ್ರು ದೇಶದಿಂದ ವಾಪಸ್ ಬಂದ ಅಭಿಯನ್ನು ಎಂಥ ಪರೀಕ್ಷೆಗೆ ಒಳಪಡಿಸಲಾಗುತ್ತದೆ?

   ಪಾಕಿಸ್ತಾನ ಸೇನೆ ಅಭಿನಂದನ್ ಅವರನ್ನು ಭಾರತಕ್ಕೆ ಶುಕ್ರವಾರ ರಾತ್ರಿ ಹಸ್ತಾಂತರ ಮಾಡಿದ ಬಳಿಗೆ ಭಾನುವಾರ ದೆಹಲಿಯ ರೀಸರ್ಚ್ ಅಂಡ್ ರೆಫರಲ್ ಆಸ್ಪತೆಯಲ್ಲಿ ಅಭಿನಂದನ್ ಅವರನ್ನು ಎಂಆರ್ಐ ಸ್ಕ್ಯಾನ್ ಗೆ ಒಳಪಡಿಸಲಾಯಿತು. ಈ ಸಂದರಭದಲ್ಲಿ ಅವರ ಬೆನ್ನುಮೂಳೆಗೆ ಪೆಟ್ಟು ಬಿದ್ದಿರುವುದು ತಿಳಿದುಬಂದಿದೆ.

   ದೈಹಿಕ ಹಲ್ಲೆ ಇಲ್ಲದಿದ್ದರೂ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ : ಅಭಿನಂದನ್

   ಬಹುಶಃ ಮಿಗ್ 21 ವಿಮಾನ ಪತನವಾಗುತ್ತಿದ್ದಂತೆಯೇ ಪ್ಯಾರಚ್ಯೂಟ್ ಸಹಾಯದಿಂದ ಅಭಿನಂದನ್ ಹೊರಬಂದು, ಗಡಿನಿಯಂತ್ರಣ ರೇಖೆಯ ಆಚೆ ಬಿದ್ದ ಸಮಯದಲ್ಲಿ ಈ ಪೆಟ್ಟಾಗಿದೆ ಎಂದು ಅಂದಾಜಿಸಲಾಗಿದೆ.

   ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.

   English summary
   The MRI scan of Indian Air Force Wing Commander Abhinandan Varthaman was conducted on Sunday at Research and Referral Hospital in Delhi Cantonment. The report has revealed that Abhinandan has suffered an injury in his lower spine
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X