Get Updates
Get notified of breaking news, exclusive insights, and must-see stories!

ಅಕ್ಬರ್ ಪರ ವಕಾಲತ್ತು ಮಾಡುವ ಪಟ್ಟಿಯಲ್ಲಿ 97 ವಕೀಲರ ಹೆಸರು

ನವದೆಹಲಿ, ಅಲ್ಟೋಬರ್ 16: ವಿವಿಧ ಪರ್ತಕರ್ತೆಯರಿಂದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಒಳಗಾಗಿರುವ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರ ಪರ ಕಾನೂನು ಹೋರಾಟ ನಡೆಸುತ್ತಿರುವ ಕರಂಜವಾಲಾ ಆಂಡ್ ಕೋ ಕಾನೂನು ಸಂಸ್ಥೆಯ ಪಟ್ಟಿಯಲ್ಲಿ ಬರೋಬ್ಬರಿ 97 ವಕೀಲರಿದ್ದಾರೆ.

ಅಕ್ಬರ್ ಅವರು ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 97 ವಕೀಲರ ಪೈಕಿ ಆರು ಮಂದಿ ಮಾತ್ರ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ವಿಶೇಷವೆಂದರೆ ಈ 97 ವಕೀಲರ ಪಟ್ಟಿಯಲ್ಲಿ ಸುಮಾರು 30 ಮಂದಿ ಮಹಿಳೆಯರಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಎಂಜೆ ಅಕ್ಬರ್ ಅವರು ಪತ್ರಿಕೆಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಪ್ರಿಯಾ ರಮಣಿ ಆರೋಪಿಸಿದ್ದರು. ಅವರಲ್ಲದೆ, ಇನ್ನೂ ಅನೇಕ ಪತ್ರಕರ್ತೆಯರು ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

me too mj akbar sexual harassment 97 lawyers in Karanjawala law firm

ಈ ಎಲ್ಲ ಆರೋಪಗಳು ಸುಳ್ಳು ಮತ್ತು ಕಟ್ಟುಕಥೆ ಎಂದು ಅಕ್ಬರ್ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ, ಪ್ರಿಯಾ ರಮಣಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

'ನನ್ನ ಪತ್ನಿ ಒಬ್ಬ ಕೇಂದ್ರ ಸಚಿವ ಮತ್ತು 97 ವಕೀಲರನ್ನು ಎದುರಿಸುತ್ತಿದ್ದಾಳೆ. ಅದನ್ನು ಮಾಡಲು ವಿಶೇಷ ಧೈರ್ಯ ಬೇಕು' ಎಂದು ರಮಣಿ ಅವರ ಪತಿ, ಪತ್ರಕರ್ತ ಸಮರ್ ಹಲಾರ್ನ್‌ಕರ್ ಹೇಳಿದ್ದಾರೆ.

ನನಗೆ ಆಕೆ ಸುಮಾರು 20 ವರ್ಷಗಳಿಂದ ಚೆನ್ನಾಗಿ ಗೊತ್ತು. ಪ್ರಭಾವಶಾಲಿ ವ್ಯಕ್ತಿಗಳ ವಿರುದ್ಧ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಲ್ಲರು. ಮಾಧ್ಯಮ ಸಂಸ್ಥೆಗಳಲ್ಲಿ ಅಂತಹ ಪರಿಸ್ಥಿತಿಯನ್ನು ಎದುರಿಸಲು ಯಾವುದೇ ವ್ಯವಸ್ಥೆಗಳಿಲ್ಲ. ಅಂತಹ ದೂರುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಪ್ರಭಾವಶಾಲಿ ಪುರುಷರ ವಿರುದ್ಧ ಧ್ವನಿ ಎತ್ತಿದರೂ ಕೊನೆಗೆ ಸೋಲುವುದು ಮಹಿಳೆ ಮಾತ್ರ ಎಂದು ಸಮರ್ ಬರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+