ಗ್ರ್ಯಾಚ್ಯುಟಿ ಸೌಲಭ್ಯಕ್ಕೆ ಹೆರಿಗೆ ರಜಾ ಅವಧಿಯೂ ಪರಿಗಣನೆ

ನವದೆಹಲಿ, ಮಾರ್ಚ್ 22: ಇನ್ನುಮುಂದೆ ಹೆರಿಗೆ ರಜೆಗೆ ತೆರಳಿದ ಮಹಿಳಾ ನೌಕರರ ಹೆರಿಗೆ ರಜೆ ಅವಧಿಯನ್ನು ಗ್ರ್ಯಾಚ್ಯುಟಿ ನೀಡುವ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರದ ನೂತನ ವಿದೇಯಕ ಅಸ್ತು ನೀಡಿದೆ.

ಈ ನೂತನ ವಿದೇಯಕದಿಂದ ಹೆರಿಗೆ ರಜೆ ಅವಧಿಯನ್ನೂ ಗ್ರ್ಯಾಚ್ಯುಟಿ ನೀಡುವ ಸೇವಾವಧಿಯಾಗಿ ಪರಿಗಣಿಸುವುದು ಮತ್ತು ಆ ಅವಧಿಯ ಗ್ರ್ಯಾಚ್ಯುಟಿ ಹಣವನ್ನು ನೌಕರರಿಗೆ ನೀಡಲು ನೂತನ ವಿದೇಯಕ ಸಮ್ಮತಿಸಿದೆ.

ಕೇಂದ್ರ ಸರ್ಕಾರ ಸ್ವೀಕರಿಸಿರುವ ಗ್ರಾಚ್ಯುಟಿ ಬಿಲ್ 2017ರ ಅನುಸಾರ ಹೆರಿಗೆ ರಜೆಗೆ ತೆರಳಿದ ಮಹಿಳಾ ನೌಕರರ ಹೆರಿಗೆ ರಜೆ ಅವಧಿಯನ್ನು ಗ್ರ್ಯಾಚ್ಯುಟಿ ನೀಡುವ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಕಳೆದ ವರ್ಷವಷ್ಟೇ ತಹೆ ಮೆಟರ್ನಿಟಿ ಬೆನಿಫಿಟ್ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದ ರಾಜ್ಯ ಸಭೆ ಇತ್ತೀಚೆಗಷ್ಟೇ ಲೋಕಸಭೆಯಲ್ಲೂ ಅಂಗೀಕಾರ ನೀಡಿತ್ತು.

Maternity leave eligible for gratuity benefit

ಇದರ ಬೆನ್ನಲ್ಲೇ ಗ್ರಾಚ್ಯುಟಿ ವಿದೇಯಕ 2017ನ್ನು ಸಂಸತ್ ಅಂಗೀಕರಿಸಿದ್ದು, ಇನ್ನುಮುಂದೆ ಹೆರಿಗೆ ರಜೆಯ ಅವಧಿಯನ್ನು ಗ್ರ್ಯಾಚ್ಯುಟಿ ಹಣ ನೀಡಲು ಹಾಗೂ ಆ ಅವಧಿಯ ಸೇವೆಯನ್ನು ಪರಿಗಣಿಸಲು ನೂತನ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+