ದೆಹಲಿಯಲ್ಲಿ ಪತ್ನಿ, ಮಗುವನ್ನು ಕೊಂದು ನಾಪತ್ತೆಯಾದ ವ್ಯಕ್ತಿ
ನವದೆಹಲಿ, ಜನವರಿ 16: ಪತ್ನಿ ಮತ್ತು ತನ್ನ ಎರಡು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಇರಿದು ಕೊಂದ ಘಟನೆ ದೆಹಲಿಯ ಜಹಾಂಗೀರ್ಪುರದಲ್ಲಿ ಜ.15 ರಂದು ರಾತ್ರಿ ನಡೆದಿದೆ.
ಓಂಪ್ರಕಾಶ್ ಎಂಬ ವ್ಯಕ್ತಿ ತನ್ನ ಪತ್ನಿ ಶೋಭಾ ಮತ್ತು ಎರಡು ವರ್ಷದ ಮಗುವನ್ನು, ಅವರ ಮತ್ತಿಬ್ಬರು ಮಕ್ಕಳ ಎದುರಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಘಟನೆ ನಡೆದ ಸ್ಥಳದಿಂದ ಕಾಲ್ಕಿತ್ತಿದ್ದು, ಮೃತ ಶೋಭಾ ಸಹೋದರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆಯ ಕುರಿತು ಪ್ರತ್ಯಕ್ಷ ಸಾಕ್ಷಿಗಳಾದ ಮಕ್ಕಳೇ ಬಾಯಿಬಿಟ್ಟಿದ್ದು, ಕೊಲೆ ಮಾಡುವುದಕ್ಕೆ ಕಾರಣವೇನು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಓಂಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಓಂಪ್ರಕಾಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications