ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಳ್ಳಲು ಮಮತಾ ಷಡ್ಯಂತ್ರ: ಅಧೀರ್ ರಂಜನ್

ನವದೆಹಲಿ, ಮಾರ್ಚ್ 11: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಬರುವ ಚುನಾವಣೆಯಲ್ಲಿ ಸಿಂಪತಿಯ ಮತ ಗಳಿಸಲು ಮಾಡುತ್ತಿರುವ ನಾಟಕ ಇದು ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಮೇಲೆ ಕೊಲೆ ಯತ್ನ, ಪಿತೂರಿ, ಹಲ್ಲೆಯಂತಹ ಘಟನೆಗಳು ನಡೆದಿವೆ ಎಂದು ಹೇಳುವ ಮೂಲಕ ಜನರಿಂದ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಒಂದು ವೇಳೆ ಪಿತೂರಿ ನಡೆದಿದ್ದರೆ ಸಿಬಿಐ, ಎನ್ ಐಎ, ಸಿಐಡಿಗೆ ಕರೆ ಮಾಡಬೇಕಿತ್ತು. ಅಥವಾ ಎಸ್ ಐಟಿ ರಚಿಸಬೇಕಿತ್ತು. ಮಮತಾ ಬ್ಯಾನರ್ಜಿ ಏಕೆ ಇದನ್ನು ಮಾಡಲಿಲ್ಲ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಚೌಧರಿ, ನೆಪಗಳೊಂದಿಗೆ ಸಾರ್ವಜನಿಕರಿಂದ ಸಹಾನುಭೂತಿಯನ್ನು ಪಡೆಯಲು ಬಯಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

Mamata Is Doing All This To Gain Sympathy Votes: Adhir Ranjan Chowdhury On Nandigram Mishap

ತನ್ನೊಂದಿಗೆ ಪೊಲೀಸರು ಇರಲಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುವುದು ಹಾಸ್ಯಾಸ್ಪದವಾಗಿದೆ. ಇದು ನೆಪಗಳೊಂದಿಗೆ ಚುನಾವಣೆ ಗೆಲ್ಲುವ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ.

ನಂದಿಗ್ರಾಮಕ್ಕೆ ನಾಮಪತ್ರ ಸಲ್ಲಿಸಲು ತೆರಳಿದ್ದಾಗ ಕೆಲವು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದರು ಎಂದು ಖುದ್ದಾಗಿ ಅವರೇ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+