Gruha Jyothi Scheme: ಉಚಿತ ವಿದ್ಯುತ್ ಯೋಜನೆ: ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು ಹೇಗೆ, ಹೊಸ ದಾಖಲೆಗಳ ವಿವರ

Gruha Jyothi Scheme: ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾಗಿರುವ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ಕರ್ನಾಟಕ ಸರ್ಕಾರವು ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಅಥವಾ ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ ಪಡೆಯಬೇಕಾದರೆ ನೀವು ಮತ್ತೊಮ್ಮೆ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ ನಿಮ್ಮ ಗೃಹಜ್ಯೋತಿ ಯೋಜನೆಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲನೆ ಮಾಡಿಕೊಳ್ಳುವುದಕ್ಕೆ ಹಾಗೂ ಗೃಹ ಜ್ಯೋತಿಗೆ ನೀವು ಹೊಸದಾಗಿ ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಗೃಹಜ್ಯೋತಿ ಯೋಜನೆಯನ್ನು ಅರ್ಹರಿಗೆ ಮಾತ್ರ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮಹತ್ವದ ಕ್ರಮವನ್ನು ತೆಗೆದುಕೊಂಡಿದೆ. ಇದೀಗ ಗೃಹಜ್ಯೋತಿ ಯೋಜನೆಯಲ್ಲಿ ನಿಮ್ಮ ಹೆಸರು ಅಥವಾ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಹೇಗೆ ಎನ್ನುವ ವಿವರವನ್ನು ಈ ಲೇಖನದಲ್ಲಿ ನೋಡೋಣ. ಗೃಹಜ್ಯೋತಿ ಯೋಜನೆಯಲ್ಲಿ ನಿಮ್ಮ ಹೆಸರು ಅಥವಾ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡುವುದು ತುಂಬಾ ಸುಲಭವಾಗಿದೆ. ನೀವು ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ (Seva Sindhu)ಗೆ ಭೇಟಿ ನೀಡಿ Application Status ಮೂಲಕ ಅಥವಾ ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಐಡಿ (Account ID) ಬಳಸಿಕೊಂಡು ಪರಿಶೀಲನೆ ಮಾಡಬಹುದಾಗಿದೆ.

Gruha Jyothi Scheme

ಗೃಹಜ್ಯೋತಿ ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ

ಇನ್ನು ಗೃಹಜ್ಯೋತಿ ಯೋಜನೆಯಲ್ಲಿ ನಿಮ್ಮ ಅರ್ಜಿಯ ಸ್ಥಿತಿಗತಿ ಪರಿಶೀಲನೆ ಮಾಡುವುದು ತುಂಬಾ ಸರಳವಾಗಿದೆ. ಅಧಿಕೃತ Seva Sindhu Status Tracker ಲಿಂಕ್‌ಗೆ ಭೇಟಿ ಕೊಡಿ. ನಿಮ್ಮ ವಿದ್ಯುತ್ ಸರಬರಾಜು ಮಾಡುವ ಕಂಪನಿಯನ್ನು (ಉದಾಹರಣೆಗೆ: BESCOM) ಆಯ್ಕೆ ಮಾಡಿ. ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಐಡಿ (Account ID/Connection ID) ಯನ್ನು ನಮೂದಿಸಿ. 'Submit' ಅಥವಾ 'Check Status' ಬಟನ್ ಕ್ಲಿಕ್ ಮಾಡಿ. ನಿಮ್ಮ ಅರ್ಜಿಯ ಸ್ಥಿತಿ ಮತ್ತು ಫಲಾನುಭವಿಗಳ ವಿವರಗಳು ಪರದೆಯ ಮೇಲೆ ಕಾಣಿಸಲಿದೆ.

ಮನೆ - ಮನೆ ಪರಿಶೀಲನೆ ಪ್ರಕ್ರಿಯೆ ಪ್ರಾರಂಭ

ಇನ್ನು ಕರ್ನಾಟಕ ಸರ್ಕಾರವು ಫಲಾನುಭವಿಗಳ ಮನೆ-ಮನೆ ಪರಿಶೀಲನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಜುಲೈ 1ರ ಬುಧವಾರದಿಂದ ಪ್ರಾರಂಭಿಸಿದೆ. ಸರ್ಕಾರವು ಗೃಹಜ್ಯೋತಿ ಯೋಜನೆಯ ದುರ್ಬಳಕೆಯನ್ನು ತಡೆಯಲು ಮತ್ತು ಅರ್ಹರನ್ನು ಗುರುತಿಸಲು ಮನೆ-ಮನೆ ಪರಿಶೀಲನಾ ಕಾರ್ಯವನ್ನು ಆರಂಭಿಸಿದೆ. ಸ್ಥಳೀಯ ವಿದ್ಯುತ್ ಇಲಾಖೆಯ (ESCOM) ಸಿಬ್ಬಂದಿ ನಿಮ್ಮ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ಮಾಡಲಿದ್ದಾರೆ.

Free Electricity Scheme: ಗೃಹಲಕ್ಷ್ಮೀ ಜೊತೆಗೆ ಗೃಹಜ್ಯೋತಿ ಯೋಜನೆಯಲ್ಲೂ ಬದಲಾವಣೆ: ಈ ಹೊಸ ದಾಖಲೆಗಳ ಸಲ್ಲಿಕೆ ಕಡ್ಡಾಯ
Free Electricity Scheme: ಗೃಹಲಕ್ಷ್ಮೀ ಜೊತೆಗೆ ಗೃಹಜ್ಯೋತಿ ಯೋಜನೆಯಲ್ಲೂ ಬದಲಾವಣೆ: ಈ ಹೊಸ ದಾಖಲೆಗಳ ಸಲ್ಲಿಕೆ ಕಡ್ಡಾಯ

ಗೃಹಜ್ಯೋತಿ ಪರಿಷ್ಕರಣೆ ಯಾವೆಲ್ಲ ಹೊಸ ದಾಖಲೆಗಳು

ಆಧಾರ್ ಕಾರ್ಡ್

ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಮತದಾರರ ಗುರುತಿನ ಚೀಟಿ

ಪಾನ್ ಕಾರ್ಡ್

ಬಾಡಿಗೆ ಒಪ್ಪಂದ ಪತ್ರ

ರೇಷನ್ ಕಾರ್ಡ್

ಜಾತಿ ಪ್ರಮಾಣ ಪತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+