ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ?
Recommended Video
ನವದೆಹಲಿ, ಏಪ್ರಿಲ್ 24: ಪ್ರತಿ ವರ್ಷ ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಕುರ್ತಾ ಕಳಿಸುತ್ತಾರೆ! ಹಾಗೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಕಾಲ ನಡೆಸಿದ ಸಂವಾದದ ಭಾಗವನ್ನು ಎಎನ್ ಐ ನ್ಯೂಸ್ ಏಜೆನ್ಸಿ ಪ್ರಸಾರ ಮಾಡಿದೆ. ಈ ಸಂದರ್ಶನದಲ್ಲಿ ಮೋದಿ ಅವರು ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟಿದ್ದಾರೆ.

ವಿಪಕ್ಷದ ನಾಯಕರೊಂದಿಗೂ ನೀವು ಆಪ್ತ ಸಂಬಂಧ ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, 'ಹೌದು, ನಾನು ಹಲವು ವಿಪಕ್ಷ ನಾಯಕರೊಂದಿಗೆ ಆತ್ಮೀಯವಾಗಿದ್ದೇನೆ. ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷ ನನಗೆ ಎರಡು ಕುರ್ತಾ ಕಳಿಸಿಕೊಡುತ್ತಾರೆ. ರಾಜಕೀಯ ಬೇರೆ, ವೈಕ್ತಿಕ ಬದುಕು ಬೇರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೂ ನನಗೆ ಬಂಗಾಳಿ ಸ್ವೀಟ್ ಕಳಿಸಿಕೊಡುತ್ತಾರೆ' ಎಂದು ಮೋದಿ ಹೇಳಿದರು.












Click it and Unblock the Notifications