'ಪಿಎಂ ನರೇಂದ್ರ ಮೋದಿ' ಚಿತ್ರ ತಂಡಕ್ಕೆ ಆಯೋಗದಿಂದ ನೋಟಿಸ್

ನವದೆಹಲಿ, ಮಾರ್ಚ್ 26: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಬಿಡುಗಡೆಗೆ ಅನುಮತಿ ಹೇಗೆ ನೀಡಲಾಗಿದೆ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿತ್ತು. ಈ ಬಗ್ಗೆ ಆಯೋಗಕ್ಕೆ ದೂರು ನೀಡಲು ಕೂಡಾ ಕಾಂಗ್ರೆಸ್ ಮುಂದಾಗಿತ್ತು. ಆದರೆ, ಅಷ್ಟರಲ್ಲೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಪೂರ್ವ ದೆಹಲಿಯ ರಿಟರ್ನಿಂಗ್ ಅಧಿಕಾರಿ ಮಹೇಶ್ ಅವರು, ಪಿಎಂ ನರೇಂದ್ರ ಮೋದಿ ಚಿತ್ರ್ದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಏಪ್ರಿಲ್ 5ರಂದು ಬಿಡುಗಡೆಗೆ ಸಿದ್ಧವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆ ಆಧರಿತ ಚಲನಚಿತ್ರವು ಚುನಾವನಾ ನೀತಿಸಂಹಿತೆ ಉಲ್ಲಂಘಿಸಿದೆ ಈ ಬಗ್ಗೆ ಉತ್ತರಿಸುವಂತೆ ಸೂಚಿಸಲಾಗಿದೆ.

"ಪಿಎಂ ನರೇಂದ್ರ ಮೋದಿ" ಚಿತ್ರದ ನಿರ್ಮಾಣ ಸಂಸ್ಥೆ ಮತ್ತು ಸಂಗೀತ ನೀಡಿದ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ. ಈ ಚಿತ್ರದ ಬಗೆಗಿನ ಜಾಹೀರಾತು ಪ್ರಕಟಿಸಿದ ಎರಡು ಪ್ರಮುಖ ಪತ್ರಿಕೆಗಳಿಗೂ ನೋಟಿಸ್ ನೀಡಲಾಗಿದೆ

Makers of biopic on PM Modi get notice for flouting election conduct code

ಆಯೋಗ ನೀಡಿರುವ ನೋಟಿಸ್‌ಗೆ ಉತ್ತರಿಸಲು ಮಾರ್ಚ್ 30ರವರೆಗೂ ಕಾಲಾವಕಾಶ ನೀಡಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಸಮಾಜ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾದಲ್ಲಿ, ಅದಕ್ಕೆ ಮಾಧ್ಯಮ ಪ್ರಮಾಣಪತ್ರ ಮತ್ತು ಕಣ್ಗಾವಲು ಸಮಿತಿಯ ಪ್ರಮಾಣಪತ್ರ ಅಗತ್ಯ ಎಂದು ಅವರು ಹೇಳಿದ್ದಾರೆ..

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಜಕೀಯ ವ್ಯಕ್ತಿ, ಪಕ್ಷ, ಸಂಘಟನೆ ಕುರಿತ ಚಲನಚಿತ್ರ, ಸಾಕ್ಷ್ಯಚಿತ್ರಗಳನ್ನು ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವುದಕ್ಕೆ ಪ್ರತ್ಯೇಕ ಮಾನದಂಡ, ನೀತಿ ಸಂಹಿತೆ ಅಳವಡಿಸಿಕೊಳ್ಳಲು ಮುಖ್ಯ ಚುನಾವಣಾ ಆಯೋಗಕ್ಕೆ ಸೂಚಿಸಲಾಗಿದೆ ಎಂದು ಪೂರ್ವ ದೆಹಲಿಯ ಅಧಿಕಾರಿ ಮಹೇಶ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+