ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಕೇರಳ ಸಂಸದನ ವಿರುದ್ಧ ಸೋನಿಯಾ ಗರಂ

ನವದೆಹಲಿ, ಜೂನ್ 17: ಸೋಮವಾರ ಆರಂಭವಾದ ಲೋಕಸಭೆ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೇರಳ ಕಾಂಗ್ರೆಸ್‌ನ ಸಂಸದ ಕೋಡಿಕುನ್ನಿಲ್ ಸುರೇಶ್, ಮಾತೃಭಾಷೆ ಮಲಯಾಳಂ ಬದಲು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಚ್ಚರಿ ಮೂಡಿಸಿದರು.

ಸಾಮಾನ್ಯವಾಗಿ ಮಾತೃಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಸಂಸದರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ ಬಿಜೆಪಿ ಸಂಸದರು ಮೇಜು ತಟ್ಟುವ ಮೂಲಕ ಸ್ವಾಗತಿಸಿದರು. ತಮ್ಮ ಪಕ್ಷದ ಸಂಸದನ ನಡವಳಿಕೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಸಿವಿಸಿ ಉಂಟುಮಾಡಿತು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುರೇಶ್ ಅವರನ್ನು ಕರೆದ ಸೋನಿಯಾ ಗಾಂಧಿ ಸಿಟ್ಟಿನಿಂದ ಅವರ ವಿರುದ್ಧ ಆಕ್ರೋಶ ಹೊರಹಾಕಿದರು. ತಮ್ಮ ಮಾತೃಭಾಷೆ ಮಲಯಾಳಂ ಅಥವಾ ಇಂಗ್ಲಿಷ್‌ನಲ್ಲಿ ಏಕೆ ಪ್ರಮಾಣವಚನ ಸ್ವೀಕರಿಸಲಿಲ್ಲ ಎಂದು ಸೋನಿಯಾ ಕಿಡಿಕಾರಿದರು.

lok sabha Sonia gandhi scold Kerala MP Suresh Kodikunnil for taking oath in hindi

ಈ ಘಟನೆ ಬಳಿಕ ಕೇರಳದ ಇನ್ನಿಬ್ಬರು ಕಾಂಗ್ರೆಸ್ ಸಂಸದರಾದ ರಾಜಮೋಹನ್ ಉನ್ನಿತನ್ ಮತ್ತು ವಿಕೆ ಶ್ರೀಕಂಠನ್, ಮೊದಲು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಉದ್ದೇಶಿಸಿದ್ದರಾದರೂ ಬಳಿಕ ನಿಲುವು ಬದಲಿಸಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಸುರೇಶ್, ಮಾವೆಲಿಕ್ಕರಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ ಅವರು ಮೊದಲು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುರೇಶ್ ಅವರು ಎರಡನೆಯವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧಪಕ್ಷದ ನಾಯಕರಾಗಿ ಇರಲು ಒಪ್ಪದೆ ಇದ್ದರೆ ಸುರೇಶ್ ಅವರು ನಾಯಕರಾಗಲಿದ್ದಾರೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+