ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶ ಮೇ 16ಕ್ಕೆ?

ಮತ ಎಣಿಕೆ ಮೇ 16ಕ್ಕೆ (ಶುಕ್ರವಾರ) ನಡೆಯಲಿದೆ.
ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಗಮನಾರ್ಹವೆಂದರೆ 2009ರಲ್ಲಿ ಚುನಾವಣೆಯ ವೇಳಾಪಟ್ಟಿಯನ್ನು Election Commission of India ಫೆಬ್ರವರಿ ಕೊನೆಯ ವಾರದಲ್ಲಿ ಪ್ರಕಟಿಸಿತ್ತು. ಜೂನ್ 1ರಿಂದ 16ನೇ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಾಗಿದೆ.
ಚುನಾವಣಾ ಆಯೋಗ ಈಗಾಗಲೇ ಪ್ರಾಥಮಿಕ ಸಿದ್ಧತೆಯನ್ನು ಆರಂಭಿಸಿದೆ. ಎಲ್ಲ ಬಗೆಯ ಕೆಲಸ ಕಾರ್ಯಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿವೆ. ಈ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗೃಹ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳ ಅಭಿಪ್ರಾಯ ಪಡೆಯಲಾಗುವುದು.
ದೇಶದ ಎಲ್ಲಾ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.
ಮೊದಲ ಹಂತದ ಚುನಾವಣೆ ಏಪ್ರಿಲ್ 16 ಬುಧವಾರ ( 124 ಕ್ಷೇತ್ರಗಳಲ್ಲಿ ಚುನಾವಣೆ)
ಎರಡನೆಯ ಹಂತದ ಚುನಾವಣೆ ಏಪ್ರಿಲ್ 22/23 ಮಂಗ/ಬುಧವಾರ (141 ಕ್ಷೇತ್ರಗಳಲ್ಲಿ ಚುನಾವಣೆ)
ಮೂರನೆಯ ಹಂತದ ಚುನಾವಣೆ ಏಪ್ರಿಲ್ 30 ಬುಧವಾರ ( 107 ಕ್ಷೇತ್ರಗಳಲ್ಲಿ ಚುನಾವಣೆ)
ನಾಲ್ಕನೆಯ ಹಂತದ ಚುನಾವಣೆ ಮೇ 7 ಬುಧವಾರ ( 85 ಕ್ಷೇತ್ರಗಳಲ್ಲಿ ಚುನಾವಣೆ)
ಐದನೆಯ ಹಂತದ ಚುನಾವಣೆ ಮೇ 14 ಬುಧವಾರ ( 86 ಕ್ಷೇತ್ರಗಳಲ್ಲಿ ಚುನಾವಣೆ)












Click it and Unblock the Notifications