ನಮೋ ಟಿವಿಯಲ್ಲಿ ಅಕ್ಷಯ್ ಕುಮಾರ್ ಸಿನಿಮಾ ಪ್ರಸಾರ: ಅನುಮತಿಗೆ ಮನವಿ

ನವದೆಹಲಿ, ಮೇ 2: ಅಕ್ಷಯ್ ಕುಮಾರ್ ನಟನೆಯ 'ಪ್ಯಾಡ್‌ಮ್ಯಾನ್' ಮತ್ತು 'ಟಾಯ್ಲೆಟ್-ಏಕ್ ಪ್ರೇಮ್ ಕಥಾ' ಸಿನಿಮಾಗಳನ್ನು 'ನಮೋ ಟಿವಿ'ಯಲ್ಲಿ ಪ್ರಸಾರ ಮಾಡಲು ಅನುಮತಿ ನೀಡುವಂತೆ ಬಿಜೆಪಿ ದೆಹಲಿಯ ಮುಖ್ಯ ಚುನಾವಣಾ ಕಚೇರಿಗೆ ಮನವಿ ಮಾಡಿದೆ.

ಬಿಜೆಪಿಯ ಮನವಿಯ ಕುರಿತು ದೆಹಲಿ ಚುನಾವಣಾ ಕಚೇರಿಯು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಗೊಂಡಿರುವ ಸಿನಿಮಾಗಳನ್ನು ತಾನು ಪ್ರಮಾಣೀಕರಿಸಬಹುದೇ ಎಂದು ಸ್ಪಷ್ಟಪಡಿಸುವಂತೆ ಕೋರಿದೆ.

'ನಮೋ ಟಿವಿ'ಯಲ್ಲಿ ಪ್ರಸಾರವಾಗುವ ಎಲ್ಲ ಮುದ್ರಿತ ಕಾರ್ಯಕ್ರಮಗಳನ್ನೂ ಪೂರ್ವ ಪ್ರಮಾಣೀಕರಣ ನಡೆಸಬೇಕು ಎಂದು ಚುನಾವಣಾ ಆಯೋಗ ಕಳೆದ ತಿಂಗಳು ಆದೇಶಿಸಿತ್ತು.

Lok Sabha elections 2019 BJP seeks permission to air 2 akshay kumar movies in Namo Tv

'ಈ ಸಿನಿಮಾಗಳು ಈಗಾಗಲೇ ಬಿಡುಗಡೆಗೊಂಡಿರುವುದರಿಂದ ಸ್ಪಷ್ಟನೆ ಪಡೆದುಕೊಳ್ಳುವ ಸಲುವಾಗಿ ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಆಯೋಗದಿಂದ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಈ ಮೊದಲೇ ಸೆನ್ಸಾರ್ ಮಮಡಳಿಯಿಂದ ಪ್ರಮಾಣೀಕೃತಗೊಂಡಿರುವ ಸಿನಿಮಾಗಳನ್ನು ಮತ್ತೆ ನಾವು ಪ್ರಮಾಣೀಕರಿಸಬಹುದೇ ಎಂದು ಕೇಳಲಾಗಿದೆ' ಎಂಬುದಾಗಿ ದೆಹಲಿ ಚುನಾವಣಾ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಜಾಹೀರಾತುಗಳಿಗೆ ಅನುಮತಿ ಪಡೆದುಕೊಳ್ಳುವ ಸಲುವಾಗಿ ಇದುವರೆಗೂ ಬಿಜೆಪಿ 308 ಅರ್ಜಿಗಳನ್ನು ಸಲ್ಲಿಸಿದ್ದರೆ, ಕಾಂಗ್ರೆಸ್ 120 ಮತ್ತು ಎಎಪಿ 23 ಅರ್ಜಿಗಳನ್ನು ಸಲ್ಲಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+