ಹಬ್ಬಕ್ಕೂ ಮೊದಲೇ ಗೃಹಸಾಲ ತುಟ್ಟಿ: ಜೇಬಿಗೆ ಬಿತ್ತು ಕತ್ತರಿ
ನವದೆಹಲಿ , ಅ.3: ಗೃಹ ಮತ್ತು ವಾಹನಗಳ ಮೇಲಿನ ಬಡ್ಡಿ ದರವನ್ನು ಆರ್‌ಬಿಐ ನೀತಿ ಪ್ರಕಾರ ಎಸ್‌ಬಿಐ, ಎಚ್‌ಡಿಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು 5ರಿಂದ 10 ಬಿಪಿಎಸ್ ನಷ್ಟು ಏರಿಕೆ ಮಾಡಿದೆ.
ಅಕ್ಟೋಬರ್ 3ರಿಂದ ಅನ್ವಯವಾಗುವಂತೆ ಏರಿಕೆ ಮಾಡಲಾಗಿದೆ. ಎಚ್‌ಡಿಎಫ್ ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ಬಡ್ಡಿದರ ಏರಿಕೆ ಮಾಡಿವೆ.
ಎಚ್‌ಡಿಎಫ್ ಸಿ ಬ್ಯಾಂಕ್ 10 ಆರ್‌ಪಿಎಲ್ ಆರ್ ಪಾಯಿಂಟ್ ನ್ನು ಏರಿಕೆ ಮಾಡಿದೆ, ಎಸ್‌ಬಿಐ ಸಾಲಗಳ ಮೇಲಿನ ಬಡ್ಡಿದರ 5 ಬಿಪಿಎಸ್ ಏರಿಕೆ ಆಗಿರುವುದರಿಂದ 1 ವರ್ಷದ ಎಂಸಿಎಲ್ಆರ್ನ ಬಡ್ಡಿ ದರ ಶೇ.8.5 ಆಗಲಿದೆ. ಐಸಿಐಸಿಐ ಸಾಲಗಳ ಮೇಲಿನ ಎಂಸಿಎಲ್ಆರ್ ಶೇ.8.65, ಎಚ್ಡಿಎಫ್ಸಿ ಗೃಹ ಸಾಲದ ಮೇಲಿನ ಬಡ್ಡಿದರ 10 ಬಿಪಿಎಸ್ ಹೆಚ್ಚಾಗಿವೆ.

30 ಲಕ್ಷ ರೂ.ವರೆಗಿನ ಗೃಹ ಸಾಲದ ಮೇಲಿನ ಬಡ್ಡಿದರ ಶೇ.8.85, 30-75 ಲಕ್ಷ ರೂ.ವರೆಗಿನ ಸಾಲದ ಮೇಲಿನ ಬಡ್ಡಿದರ ಶೇ.9 ಮತ್ತು 75 ಲಕ್ಷ ರೂ.ಗೂ ಹೆಚ್ಚಿನ ಸಾಲದ ಬಡ್ಡಿದರ ಶೇ.9.05 ಆಗಿರಲಿದೆ.
ಸೆಪ್ಟೆಂಬರ್ 1ರಂದು ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಳ ಮೇಲೆ ಬಡ್ಡಿ ದರವನ್ನು ಏರಿಕೆ ಮಾಡಿತ್ತು. ಆರ್.ಬಿ.ಐ. ಇತ್ತೀಚೆಗೆ ರೆಪೋ ದರವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಸಾಲಗಳ ಮೇಲೆ 20 ಅಂಶ ಅಂದರೆ, ಶೇ. 0.2 ರಷ್ಟು ಬಡ್ಡಿಯನ್ನು ಏರಿಕೆ ಮಾಡಿದೆ.
ಹೀಗಾಗಿ ಸ್ಟೇಟ್ ಬ್ಯಾಂಕ್ ಸಾಲಗಳ ಬಡ್ಡಿ ದರ ಈಗ ಶೇ. 7.9 ನಿಂದ 8.1 ಗೆ ಏರಿಕೆಯಾಗಿತ್ತು. ಏರಿಕೆಯ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲಗಳು ತುಟ್ಟಿಯಾಗಲಿವೆ. ಅಲ್ಪಾವಧಿ ಸಾಲಗಳ ಮೇಲೆ ಬಡ್ಡಿ ಏರಿಕೆ ಜೊತೆಗೆ ಮೂರು ವರ್ಷಗಳ ದೀರ್ಘಕಾಲದ ಸಾಲಗಳ ಮೇಲೆ ಬಡ್ಡಿ ಏರಿಕೆ ಮಾಡಿದ್ದು, ಈ ಏರಿಕೆಯಿಂದ ಉಳಿದ ಬ್ಯಾಂಕ್‌ಗಳೂ ಸಾಲಗಳ ಮೇಲಿನ ಬಡ್ಡಿಯನ್ನು ಏರಿಸಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 6 ರಂದು ರೆಪೋ ದರವನ್ನು 0.25 ರಷ್ಟು ಏರಿಸುವ ಮೂಲಕ ಶೇ. 6.25ಕ್ಕೆ ಏರಿಕೆ ಮಾಡಿತ್ತು. ಆರ್.ಬಿ.ಐ. ನ ಈ ರೆಪೋ ದರ ಏರಿಕೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ, ಉಳಿದ ಬ್ಯಾಂಕ್‌ಗಳ ಬಡ್ಡಿ ದರವನ್ನು ಏರಿಸಲು ಕಾರಣವಾಗಿದೆ. ಇದೀಗ 75 ಲಕ್ಷರೂ ಗೂ ಹೆಚ್ಚಿನ ಸಾಲದ ಬಡ್ಡಿದರ ಶೇ.9.05ರಷ್ಟು ಆಗಲಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications