ಟ್ರಂಪ್ ಭೇಟಿಯಾದ ಸಿಎಂ ಯಡಿಯೂರಪ್ಪ; ಫೋಟೊ ವೈರಲ್
ನವದೆಹಲಿ ಫೆಬ್ರವರಿ 26: ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಈ ಕುರಿತಂತೆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಡೊನಾಲ್ಡ್ ಟ್ರಂಪ್ ದಂಪತಿಯನ್ನು ಮಂಗಳವಾರ ಸಂಜೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬಿ ಎಸ್ ಯಡಿಯೂರಪ್ಪ ಭೇಟಿಯಾಗಿ ಹಸ್ತಲಾಘವ ನೀಡಿ, ಶುಭ ಕೋರಿದರು.
ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಡೊನಾಲ್ಡ್ ಟ್ರಂಪ್ ದಂಪತಿಗೆ ಔತಣಕೂಟ ಆಯೋಜಿಸಿತ್ತು. ಈ ಔತಣಕೂಟಕ್ಕೆ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರಿಗೆ ಆಹ್ವಾನವಿತ್ತು. ಭವನದಲ್ಲಿ ಟ್ರಂಪ್ ದಂಪತಿ ಆಹ್ವಾನಿತರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು.

ಕಳೆದ ತಿಂಗಳು ಸ್ವಿಟ್ಜರ್ಲ್ಯಾಂಡ್‌ನಲ್ಲಿ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲೂ ಯಡಿಯೂರಪ್ಪ ಟ್ರಂಪ್ ಮುಖಾಮುಖಿಯಾಗಿದ್ದರು. ಆದರೆ, ಪರಸ್ಪರ ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಟ್ರಂಪ್ ಭಾಷಣ ಮಾತ್ರ ಯಡಿಯೂರಪ್ಪ ಕೇಳಿದ್ದರು.












Click it and Unblock the Notifications