ಪಿಎಂ ಮೋದಿಯ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

Recommended Video

      ಪಿ ಎಂ ನರೇಂದ್ರ ಮೋದಿಯವರನ್ನ ಭೇಟಿ ಮಾಡಿದ ಸಿ ಎಂ ಎಚ್ ಡಿ ಕೆ | Oneindia Kannada

      ನವ ದೆಹಲಿ, ಮೇ 28: ಮುಖ್ಯಮಂತ್ರಿ ಆದ ನಂತರ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು.

      ಇಂದು (ಮೇ 28) ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿನ ಪ್ರಧಾನ ಮಂತ್ರಿ ಅವರ ನಿವಾಸದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು ಕೆಲವು ಸಮಯಗಳ ಕಾಲ ಚರ್ಚೆ ಮಾಡಿದರು.

      ಮೋದಿ ಅವರೊಂದಿಗೆ ರೈತರ ಸಮಸ್ಯೆ, ಕಲ್ಲಿದ್ದಲು ಸಮಸ್ಯೆ ಸೇರಿದಂತೆ ಇನ್ನೂ ಕೆಲವು ರಾಜ್ಯದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ಕುಮಾರಸ್ವಾಮಿ ಅವರು ಹೇಳಿದರು. ಮೋದಿ ಅವರು ಕುಮಾರಸ್ವಾಮಿ ಅವರಿಗೆ ಆಡಳಿತ ಸಂಭಂದಿತ ಕೆಲವು ಸಲಹೆಗಳನ್ನೂ ನೀಡಿದರಂತೆ.

      Karnataka CM Kumaraswamy meets Prime minister Narendra Modi

      'ಆಡಳಿತದ ವಿಚಾರವಾಗಿ ಮೋದಿ ಅವರು ಉಪಯುಕ್ತ ಸಲಹೆಗಳನ್ನು ಮೋದಿ ಅವರು ನೀಡಿದರು, ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದರು.

      ಇಂದು ಮಧ್ಯಾಹ್ನ ರಾಜ್ ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರ ಪುಣ್ಯ ಸ್ಥಳಕ್ಕೆ ನಮನ ಸಲ್ಲಿಸಿದ್ದ ಕುಮಾರಸ್ವಾಮಿ ಅವರು ಆ ನಂತರ ಮೋದಿ ಅವರನ್ನು ಭೇಟಿ ಮಾಡಿದರು. ಈ ಭೇಟಿಯ ನಂತರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರನ್ನೂ ಕುಮಾರಸ್ವಾಮಿ ಭೇಟಿ ಆಗಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+