1 ಲಕ್ಷ ದಾಟಿದ ಆಂಧ್ರ, ಕರ್ನಾಟಕ: ಯಾವ ರಾಜ್ಯದಲ್ಲಿ ಎಷ್ಟು ಕೇಸ್?
ದೆಹಲಿ, ಜುಲೈ 27: ಸೋಮವಾರ ಸಂಜೆ ವೇಳೆಗೆ ಬಂದ ವರದಿ ಬಳಿಕ, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಮಹಾರಾಷ್ಟ್ರ, ತಮಿಳುನಾಡು ಹಾಗು ದೆಹಲಿ ಬಳಿಕ ಈಗ ಕರ್ನಾಟಕ ಮತ್ತು ಆಂಧ್ರದಲ್ಲಿ ಒಂದು ಲಕ್ಷ ಕೇಸ್ ದಾಖಲಾಗಿದೆ.
ಇಂದು ನಾಲ್ಕು ರಾಜ್ಯಗಳಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಇಂದು ಹೆಚ್ಚು ಕೇಸ್ ದಾಖಲಾಗಿದೆ. ತಮಿಳುನಾಡಿನಲ್ಲಿ ಎರಡನೇ ಹೆಚ್ಚು ಪ್ರಕರಣ ವರದಿಯಾಗಿದೆ. ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶ ಹಾಗೂ ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ.
ಕರ್ನಾಟಕದಲ್ಲಿ ಇಂದು 5,324 ಹೊಸ ಕೇಸ್ ದಾಖಲಾಗಿದ್ದು, ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 1,01,465ಕ್ಕೆ ಏರಿದೆ. ಆಂಧ್ರಪ್ರದೇಶದಲ್ಲಿ ಇಂದು 6,051 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಪಾಸಿಟಿವ್ ಕೇಸ್‌ಗಳ ಸಂಖ್ಯೆ 1,02,349ಕ್ಕೆ ಜಿಗಿದಿದೆ.

- ಮಹಾರಾಷ್ಟ್ರದಲ್ಲಿ ಇಂದು 7924 ಜನರಿಗೆ ಕೊರೊನಾ ದೃಢವಾಗಿದೆ.
- ತಮಿಳುನಾಡಿನಲ್ಲಿ 6993 ಕೇಸ್ ಪತ್ತೆಯಾಗಿದೆ
- ಆಂಧ್ರ ಪ್ರದೇಶದಲ್ಲಿ 6051 ಜನರಿಗೆ ಕೊವಿಡ್ ತಗುಲಿದೆ
- ಕರ್ನಾಟಕದಲ್ಲಿ 5324 ಮಂದಿಗೆ ಕೊರೊನಾ ವಕ್ಕರಿಸಿದೆ
- ಉತ್ತರ ಪ್ರದೇಶದಲ್ಲಿ 3505 ಪ್ರಕರಣ ದಾಖಲಾಗಿದೆ
- ಪಶ್ಚಿಮ ಬಂಗಾಳದಲ್ಲಿ 2112 ಜನರಿಗೆ ಸೋಂಕು ಖಚಿತವಾಗಿದೆ
- ಬಿಹಾರದಲ್ಲಿ ಇಂದು 2192 ಮಂದಿಗೆ ಕೊರೊನಾ ಅಂಟಿಕೊಂಡಿದೆ
- ಒಡಿಶಾದಲ್ಲಿ ಇಂದು 1503 ಕೇಸ್ ದಾಖಲಾಗಿದೆ
- ತೆಲಂಗಾಣದಲ್ಲಿ 1473 ಜನರಿಗೆ ಕೊರೊನಾ ವಕ್ಕರಿಸಿದೆ
- ರಾಜಸ್ಥಾನದಲ್ಲಿ 1134 ಕೇಸ್ ವರದಿಯಾಗಿದೆ
- ಅಸ್ಸಾಂನಲ್ಲಿ 1348 ಮಂದಿಗೆ ಕೊವಿಡ್ ದೃಢವಾಗಿದೆ
- ಗುಜರಾತ್‌ನಲ್ಲಿ 1052 ಜನರಿಗೆ ಕೊರೊನಾ ಖಚಿತವಾಗಿದೆ
- ದೆಹಲಿಯಲ್ಲಿ 613 ಕೇಸ್ ದಾಖಲಾಗಿದೆ
- ಹರ್ಯಾಣದಲ್ಲಿ 795 ಕೇಸ್ ಪತ್ತೆಯಾಗಿದೆ
- ಮಧ್ಯಪ್ರದೇಶದಲ್ಲಿ 789 ಜನರಿಗೆ ಕೊರೊನಾ ಅಂಟಿದೆ
- ಕೇರಳದಲ್ಲಿ 702 ಜನರಿಗೆ ಸೋಂಕು ತಗುಲಿದೆ.












Click it and Unblock the Notifications