ನಿರ್ದೇಶಕ ಕರಣ್ ಜೋಹರ್ ಗೆ ಐದು ವರ್ಷ ಜೈಲು ಭೀತಿ

ನವದೆಹಲಿ, ಜನವರಿ 25: ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಗೆ ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯು ಶೋಕಾಸ್ ನೋಟಿಸ್ ನೀಡಿದೆ.

ರೋಹಿತ್ ಶೆಟ್ಟಿ ಅವರ India's Next Superstar ರಿಯಾಲಿಟಿ ಶೋನಲ್ಲಿ ತಂಬಾಕು ಉತ್ಪನ್ನ ಪರ ಪ್ರಚಾರ ಮಾಡಿದ ಆರೋಪವನ್ನು ಕರಣ್ ಮೇಲೆ ಹೊರೆಸಲಾಗಿದೆ. ಕರಣ್ ಜೋಹರ್ ಹಾಗೂ ಅವರ ಧರ್ಮಾ ಪ್ರೊಡಕ್ಷನ್, ವಿತರಕರು, ಕಾರ್ಯಕ್ರಮದ ತೀರ್ಪುಗಾರರು ಮತ್ತು ಟಿವಿ ವಾಹಿನಿಯ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

Karan Johar lands in legal trouble, might end up in jail for 5 years

ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿರುವ 'ಇಂಡಿಯಾಸ್ ನೆಕ್ಸ್ಟ್ ಸೂಪರ್ ಸ್ಟಾರ್ಸ್' ಕಾರ್ಯಕ್ರಮದಲ್ಲಿ 'ಕಮಲಾ ಪಸಂದ್ ಪಾನ್ ಮಸಲಾ' ಬ್ರಾಂಡ್ ನ ಪ್ರಚಾರ ಮಾಡಲಾಗಿದೆ. ಈ ಕಾರ್ಯಕ್ರಮ ಭಾರತದಾದ್ಯಂತ ಪ್ರಸಾರವಾಗಿದ್ದು, ಇದರಿಂದ ತಂಬಾಕು ಸೇವನೆಯನ್ನು ಪ್ರಚಾರ ಮಾಡಿದ್ದಂತಾಗಿದೆ ಇದು ಕಾನೂನು ಉಲ್ಲಂಘನೆಯಾಗಿದೆ ಎಂದು ನೋಟಿಸ್ ನಲ್ಲಿದೆ.

Cigarette and other Tobacco Products Act (COTPA) 2003 ಕಾನೂನಿನ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 10 ದಿನಗಳಲ್ಲಿ ಉತ್ತರಿಸುವಂತೆ ಕರಣ್ ಜೋಹರ್ ಹಾಗೂ ಧರ್ಮಾ ಪ್ರೊಡಕ್ಷನ್ಸ್ ಗೆ ನೋಟಿಸ್ ನೀಡಲಾಗಿದೆ.

ಈ ಹಿಂದೆ ಇತ್ತೇಫಾಕ್ ಚಿತ್ರದ ಸಂದರ್ಭದಲ್ಲಿ ನಟ ಶಾರುಖ್ ಖಾನ್, ಗೌರಿ ಖಾನ್ ಜತೆಗೆ ಕರಣ್ ಜೋಹರ್ ಅವರಿಗೆ ಸಿಗರೇಟ್ ಪರ ಪ್ರಚಾರ ಮಾಡಿದ ಆರೋಪದ ಮೇಲೆ ನೋಟಿಸ್ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+