'ಮೈ ಲಾರ್ಡ್' ಎಂದು ಕರೆಯದಂತೆ ಮನವಿ ಮಾಡಿದ ನ್ಯಾಯಾಧೀಶ ಮುರಳೀಧರ್
ದೆಹಲಿ, ಮಾರ್ಚ್ 16: ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ವಕೀಲರು ನ್ಯಾಯಾಧೀಶರನ್ನು 'ಮೈ ಲಾರ್ಡ್', 'ಯುವರ್ ಲಾರ್ಡ್ ಶಿಪ್' ಎಂದು ಕರೆಯುತ್ತಾರೆ. ಆದರೆ, ತಮ್ಮನ್ನು ಹಾಗೆ ಕರೆಯುವುದು ಬೇಡ ಎಂದು ನ್ಯಾಯಾಧೀಶ ಮುರಳೀಧರ್ ಮನವಿ ಮಾಡಿದ್ದಾರೆ.
ಜಸ್ಟಿಸ್ ಮರಳೀಧರ್ ಮಾರ್ಚ್ 6 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ನ್ಯಾಯಾಲಯದಲ್ಲಿ ವಕೀಲರು ವಾದ ಮಂಡಿಸುವಾಗ ಅವರನ್ನು ಮೈ ಲಾಡ್ ಮತ್ತು ಯುವರ್ ಲಾರ್ಡ್ ಶಿಪ್ ಎಂದು ಕರೆಯುತ್ತಿದ್ದರು.
ಕೆಲ ವರ್ಷಗಳ ಹಿಂದೆ ಹೈಕೋರ್ಟ್ ವಕೀಲರ ಸಂಘ ನ್ಯಾಯಾಧೀಶರನ್ನು ಸರ್ ಅಥವಾ ಯುವರ್ ಆನರ್ ಎಂದು ಕರೆಯುವುದು ಸೂಕ್ತ ಎಂದು ಮನವಿ ಮಾಡಿತ್ತು. ಆಗಿದ್ದರೂ, ಕೆಲವು ವಕೀಲರು ಯುವರ್ ಲಾರ್ಡ್ ಶಿಪ್ ಎಂದು ನ್ಯಾಯಾಧೀಶರನ್ನು ಸಂಬೋಧಿಸುತ್ತಿದ್ದರು.

ಪಂಜಾಬ್ ಹಾಗೂ ಹರಿಯಾಣ ಕೋರ್ಟಿನ ಮುಂದಿರುವ ಪ್ರಕರಣಗಳ ಪಟ್ಟಿ ಜೊತೆಗೆ ಇರಿಸಲಾಗಿರುವ ಟಿಪ್ಪಣಿಯಲ್ಲಿ ಈ ಕುರಿತು ಮನವಿ ಮಾಡಲಾಗಿದೆ.
ಫೆಬ್ರವರಿ 26 ರಂದು ನ್ಯಾಯಾಧೀಶ ಮುರಳೀಧರ್ ಅವರನ್ನು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ನಿಂದ ಪಂಜಾಬ್ ಹಾಗೂ ಹರಿಯಾಣ ಹೈಕೋಟ್ಸ್‌ಗೆ ವರ್ಗಾವಣೆ ಮಾಡಿತ್ತು.












Click it and Unblock the Notifications