ಜೆಎನ್ ಯುವಿನಲ್ಲಿ ದಿನೇ ದಿನೇ ಲೈಂಗಿಕ ದೌರ್ಜನ್ಯದ್ದೇ ಸುದ್ದಿ-ಸದ್ದು!
ನವದೆಹಲಿ, ಮಾರ್ಚ್ 22: ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪ್ರೊ.ಮಹೇಂದ್ರ ಪಿ ಲಾಮಾ ಮತ್ತು ರಾಜೇಶ್ ಕಾರಟ್ ಎಂಬ ಇಬ್ಬರು ಉಪನ್ಯಾಸಕರ ವಿರುದ್ಧ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇತ್ತೀಚೆಗಷ್ಟೇ ಜೆಎನ್ ಯುನ ಅತುಲ್ ಜೊಹ್ರಿ ಎಂಬ ಉಪನ್ಯಾಸಕರನ್ನು ಲೈಂಗಿಕ ಕಿರುಕುಳ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ ನಂತರ ಅವರು ಜಾಮೀನು ಪಡೆದು ಹೊರಬಂದಿದ್ದರು.

ಇದೀಗ ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಲಾಮಾ ಮತ್ತು ಕಾರಟ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಈ ಇಬ್ಬರೂ ಉಪನ್ಯಾಸಕರು ವಿದ್ಯಾರ್ಥಿನಿಯೊಬ್ಬಳನ್ನು ಕಾಲೇಜು ಕೆಲಸದ ನಿಮಿತ್ತ ಎಂದು ಚೀನಾಕ್ಕೆ ಕರೆದೊಯ್ದು, ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ. ಕಾಲೇಜು ಕಮಿಟಿಗೆ ದೂರು ಸಲ್ಲಿಸಿ, ಈ ಇಬ್ಬರು ಉಪನ್ಯಾಸಕರನ್ನೂ ಅಮಾನತುಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪೊಲಿಸರಿಗೆ ದೂರು ನೀಡಲಾಗಿತ್ತು.
ವಿದ್ಯಾರ್ಥಿಯ ದೂರಿನನ್ವಯ ಇಬ್ಬರು ಉಪನ್ಯಾಸಕರನ್ನೂ ಬಂಧಿಸಲಾಗಿತ್ತಾದರೂ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.












Click it and Unblock the Notifications