ಐಟಿ ದಾಳಿ : ಟೀ ಮಾರೋನ ಬಳಿ ಸಿಕ್ಕಿದ್ದು ಬರೊಬ್ಬರಿ 400 ಕೋಟಿ!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 18: ಅಪನಗದೀಕರಣ ಕಾರಣದಿಂದಾಗಿ ದೇಶದಲ್ಲಿ ದೊಡ್ಡ ದೊಡ್ಡ ಕಪ್ಪು ತಿಮಿಂಗಿಲಗಳೇ ಬೀಳುತ್ತಿದ್ದು ಈ ಸಾಲಿನಲ್ಲಿ ಸೂರತ್ ಮೂಲದ ಟೀ,ಬಜ್ಜಿ ವ್ಯಾಪಾರಿ, ಬಂಡವಾಳಗಾರ ಕಿಶೋರ್ ಬಜಿಯಾವಾಲ ಐಟಿ ಅದಿಕಾರಿಗಳ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಆಶ್ಚರ್ಯದ ವಿಷಯವೇನೆಂದರೆ ಅವರ ಬಳಿಯಿರುವ ನಗದು, ಚಿನ್ನ, ಆಸ್ತಿ ದಾಖಲೆ ಪತ್ರ ಎಲ್ಲವೂ ಸೇರಿ ತೆರಿಗೆ ಅಧಿಕಾರಿಗಳಿಗೆ ದಕ್ಕಿರುವುದು ಬರೋಬ್ಬರಿ 400 ಕೋಟಿ.

ಬಜಿಯಾವಾಲ ಸರಕಾರಕ್ಕೆ ತೆರೆಗೆಯನ್ನು ಪಾವತಿ ಮಾಡಿದ್ದರೂ ಅವರ ಬಳಿ ಇರುವ ಆಸ್ತಿಗೆ ಹೋಲಿಸಿದರೆ ಈಗ ಕಟ್ಟಿರುವ ತೆರಿಗೆಯ ಐದರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ಯೋಚಿಸಿದರೆ ಟೀ, ಬಜ್ಜಿ ಮಾರಾಟಗಾರ ನಂತರ ಬಂಡವಾಳಶಾಹಿಯಾಗಿ ಇಷ್ಟೆಲ್ಲಾ ಹೇಗೆ ಮಾಡಿದರು ಅನ್ನಿಸುತ್ತದೆ.[ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?]

black money

ಕಿಶೋರ್ ಬಜಿಯಾವಾಲಾ ಬಂಡವಾಳ ಹೂಡಿಕೆದಾರನಾಗಿ, ನಗರದ ಹಲವಾರು ಭಾಗಗಳಲ್ಲಿ ಕೋಟಿ, ಕೋಟಿ ಮೌಲ್ಯದ ಅಗಾಧವಾದ ಆಸ್ತಿ ಮಾಡಿದ್ದಾರೆ. ಹೆಚ್ಚಿನ ಹಣವನ್ನು ರಿಯಲ್ ಎಸ್ಟೇಟಿನಲ್ಲಿ ಹೂಡಿರುವುದು ಕಂಡು ಬಂದಿದೆ. ಈ ಸಂಬಂಧ ಐಟಿ ಅಧಿಕಾರಿಗಳು ಬೇರೆ ರಿಯಲ್ ಎಸ್ಟೇಟಿನ ಮಾಲೀಕರಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇದೇ ಮಾದರಿಯಲ್ಲಿ ಡಿಸೆಂಬರ್ ಹತ್ತರಂದು ಹುಬ್ಬಳ್ಳಿಯ ಹವಾಲ ಕಿಂಗ್ ಪಿನ್ ಕೆ.ಸಿ.ವೀರೇಂದ್ರ ಸಿಕ್ಕಿ ಬಿದ್ದಾಗಲೂ ಬಚ್ಚಲಿನ ಗೋಪ್ಯ ಕೊಠಡಿಯಲ್ಲಿ 5.7 ಕೋಟಿ ಹೊಸನಗದು, 32ಕೆಜಿ ಚಿನ್ನ, ಎಲ್ಲವೂ ಸೇರಿ ಒಟ್ಟು 152ಕೋಟಿ ಅಕ್ರಮ ಸಂಪಾದನೆಯನ್ನು ಅಧಿಕಾರಿಗಳು ಹೊರಗೆಳೆದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The IT department have raided the premises of tea cum ‘bhajia’ seller Kishore Mangal Bhajiawala and recovered approximately Rs 400 crore in cash, bullion, jewellery and property papers.
Please Wait while comments are loading...