INX ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ಸಿಬಿಐ ಚಾರ್ಜ್ ಶೀಟ್
ನವದೆಹಲಿ, ಅಕ್ಟೋಬರ್ 18: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ಅವರ ಮಗ ಕಾರ್ತಿ ಮತ್ತು ಇತರ ಹನ್ನೆರಡು ಮಂದಿ ವಿರುದ್ಧ ಸಿಬಿಐನಿಂದ ಶುಕ್ರವಾರ ಆರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲಾಗಿದೆ. ಐಎನ್ ಎಕ್ಸ್ ಮೀಡಿಯಾಗೆ ಎಫ್ ಐಪಿಬಿ (ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ) ಅನುಮತಿ ನೀಡಲು ಕೇಂದ್ರ ಮಾಜಿ ಸಚಿವ ಚಿದಂಬರಂ ಅಧಿಕಾರ ದುರುಪಯೋಗ ಮಾಡಿದ್ದಾರೆ ಎನ್ನಲಾಗಿದೆ.
ನ್ಯಾ. ಅಜಯ್ ಕುಮಾರ್ ಕುಹರ್ ಅವರ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅಕ್ಟೋಬರ್ ಇಪ್ಪತ್ತೊಂದರ ಸೋಮವಾರ ಈ ವಿಚಾರವನ್ನು ಕೈಗೆತ್ತಿಕೊಳ್ಳಲಾಗುತ್ತದೆ. "ನನ್ನ ತಂದೆಯ ಅರವತ್ತು ದಿನದ ಗಡುವನ್ನು ಮೀರಲು ಈ ಆರೋಪ ಪಟ್ಟಿ ಸಲ್ಲಿಸಲಾಗಿದೆ" ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.

ನಾವು ಕಾನೂನಿನ ಪ್ರಕಾರವೇ ಮುಂದುವರಿಯಲಿದ್ದೇವೆ. ಸರ್ಕಾರಿ ಸೇವೆಯಲ್ಲಿ ಇರುವ ನಮ್ಮ ಕುಟುಂಬದ ಎಲ್ಲರನ್ನೂ ರಾಜಕೀಯ ಕಾರಣಗಳಿಗಾಗಿ ಗುರಿ ಮಾಡಿಕೊಳ್ಳಲಾಗಿದೆ ಎಂದು ಕಾರ್ತಿ ಅರೋಪಿಸಿದ್ದಾರೆ. ಇನ್ನು ಎಫ್ ಐಪಿಬಿಯ ಕನಿಷ್ಠ ನಾಲ್ಕು ಅಧಿಕಾರಿಗಳ ಹೆಸರನ್ನು ಸಹ ಆರೋಪಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಐಎನ್ ಎಕ್ಸ್ ಪ್ರಕರಣದಲ್ಲೇ ಅಕ್ರಮ ಹಣ ವರ್ಗಾವಣೆ ತನಿಖೆ ಭಾಗವಾಗಿ ಚಿದಂಬರಂ ಜಾರಿ ನಿರ್ದೇಶನಾಲಯದ ವಶದಲ್ಲಿ ಇದ್ದಾರೆ.












Click it and Unblock the Notifications