ಇನ್ನೆರಡು ದಿನ ಇಂಟರ್ನೆಟ್ ಸೇವೆ ವ್ಯತ್ಯಯ, ನೆಟ್ ಸ್ಲೋ ಅಂತ ದೂರು ಹೇಳ್ಬೇಡಿ!
Recommended Video

ಮುಂದಿನ 48 ಗಂಟೆಗಳು ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯವಾಗಲಿದೆ | Oneindia Kannada
ನವದೆಹಲಿ, ಅಕ್ಟೋಬರ್ 12: ಮುಂದಿನ 48 ಗಂಟೆಗಳ ಕಾಲ, ವಿಶ್ವದಾದ್ಯಂತ ಅಂತರ್ಜಾಲ ಸೇವೆಯಲ್ಲಿ ವ್ಯತ್ಯವಾಗುವ ಸಾಧ್ಯತೆ ಇದೆ ಎಂದು ರಷ್ಯಾದ ಪತ್ರಿಕೆಯೊಂದು ಮಾಹಿತಿ ನೀಡಿದೆ.
ಮೇನ್ ಡೊಮೈನ್ ಸರ್ವರ್ ಗಳ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ವಿಶ್ವದಾದ್ಯಂತ ಅಂತರ್ಜಾಲ ಬಳಕೆದಾರರು ಸಂಕಷ್ಟ ಅನುಭವಿಸಬೇಕಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ.
"ಇಂಟರ್ನೆಟ್ ಸೌಲಭ್ಯ ಪೂರೈಕೆದಾರರಿಗೆ ಈ ಮಾಹಿತಿ ಲಭ್ಯವಾಗದೆ ಇದ್ದಲ್ಲಿ ಅವರ ಗ್ರಾಹಕರೆಲ್ಲ ಅಂತರ್ಜಾಲ ಸೌಲಭ್ಯ ಪಡೆಯಲು ಎರಡು ದಿನಗಳ ಕಾಲ ವಿಫಲರಾಗಬಹುದು" ಎಂದು ಕಮ್ಯುನಿಕೇಶನ್ ರೆಗ್ಯುಲೆಟರಿ ಅಥಾರಿಟಿ ತಿಳಿಸಿದೆ.

ಯಾವುದೇ ವೆಬ್ ಪೇಜ್ ಓಪನ್ ಮಾಡಿದ ಕೆಲಸಮಯ ಇಂಟರ್ನೆಟ್ ಬಳಕೆದಾರರು ಸಂಕಷ್ಟ ಅನುಭವಿಸಬಹುದು. ವೆಬ್ ಪೇಜ್ ಸರಿಯಾಗಿ ಲೋಡ್ ಆಗದೆ ಇರಬಹುದು, ಅಥವಾ ಅದಕ್ಕಾಗಿ ಬಹಳ ಸಮಯ ತೆಗೆದುಕೊಳ್ಳಬಹುದು.
ಅತ್ಯಗತ್ಯ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಈ ಸಮಸ್ಯೆ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಇಂಟರ್ನೆಟ್ ಮೈನ್ ಡೊಮೈನ್ ಸರ್ವರ್ ಸಿಬ್ಬಂದಿ ಮನವಿ ಮಾಡಿದ್ದಾರೆ..












Click it and Unblock the Notifications