ಕೋವಿಡ್-19: ಚೇತರಿಸಿಕೊಂಡ ಪ್ರಕರಣಗಳ ಅಗ್ರ 15 ರಾಜ್ಯಗಳು ಇಲ್ಲಿವೆ
ನವದೆಹಲಿ, ಜುಲೈ 2: ದೇಶದಲ್ಲಿ ದಿನೇ ದಿನೇ ಕೊರೊನಾವೈರಸ್ ಪ್ರಕರಣಗಳು ಏರುತ್ತಲೇ ಸಾಗಿದೆ. ಇದರ ನಡುವೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ.ಭಾರತದಲ್ಲಿ ಇಂದು ಹೊಸದಾಗಿ 19,148 ಪ್ರಕರಣಗಳು ಪತ್ತೆಯಾಗಿವೆ, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿದೆ. 2,26,947 ಸಕ್ರಿಯ ಪ್ರಕರಣಗಳಿವೆ.
Recommended Video
Bhuvaneswar Kumar wants RajKumar Rao to play in his biopic | Oneindia Kannada
ಇದರ ನಡುವೆ ಕೋವಿಡ್-19 ಸೋಂಕಿನಿಂದ ಚೇತರಿಕೆ ಹೊಂದುತ್ತಿರುವ ಪ್ರಮಾಣವು ಕೂಡ ಏರುತ್ತಿರುವುದು ಉತ್ತಮ ಸಂಗತಿಯಾಗಿದೆ. ಈಗಾಗಲೇ ಆರೋಗ್ಯ ಸಚಿವಾಲಯ ತಿಳಿಸಿರುವಂತೆ ಸೋಂಕಿನಿಂದ ಗುಣಮುಖರಾಗುವ ಸಂಖ್ಯೆಯು ಶೇಕಡಾ 58ಕ್ಕಿಂತ ಹೆಚ್ಚಾಗಿದೆ.
ದೇಶದಲ್ಲಿ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್ ರಾಜ್ಯಗಳು ಅತಿ ಹೆಚ್ಚು ಸೋಂಕಿಗೆ ಒಳಗಾದ ರಾಜ್ಯಗಳಾಗಿವೆ. ಅದೇ ರೀತಿಯಲ್ಲಿ ಅತಿ ಹೆಚ್ಚು ಜನರು ಚೇತರಿಸಿಕೊಂಡಿರುವುದು ಇದೇ ರಾಜ್ಯದಲ್ಲಿ. ಹೀಗೆ ಕೊರೊನಾದಿಂದ ಚೇತರಿಸಿಕೊಂಡ ಪ್ರಕರಣಗಳ ಅಗ್ರ 15 ರಾಜ್ಯಗಳು ಈ ಕೆಳಗಿವೆ.

ಸಂಖ್ಯೆ ರಾಜ್ಯಗಳು ಚೇತರಿಸಿಕೊಂಡವರ ಸಂಖ್ಯೆ
| ಸಂಖ್ಯೆ | ರಾಜ್ಯಗಳು | ಚೇತರಿಸಿಕೊಂಡವರು |
| 1 | ಮಹಾರಾಷ್ಟ್ರ | 93,1154 |
| 2 | ದೆಹಲಿ | 59,992 |
| 3 | ತಮಿಳುನಾಡು | 52,926 |
| 4 | ಗುಜರಾತ್ | 24,030 |
| 5 | ಉತ್ತರ ಪ್ರದೇಶ | 16,629 |
| 6 | ರಾಜಸ್ಥಾನ | 14,574 |
| 7 | ಪಶ್ಚಿಮ ಬಂಗಾಳ | 12,528 |
| 8 | ಮಧ್ಯಪ್ರದೇಶ | 10,655 |
| 9 | ಹರಿಯಾಣ | 10,499 |
| 10 | ತೆಲಂಗಾಣ | 8,082 |
| 11 | ಕರ್ನಾಟಕ | 8,063 |
| 12 | ಬಿಹಾರ | 7,943 |
| 13 | ಆಂಧ್ರಪ್ರದೇಶ | 6,988 |
| 14 | ಅಸ್ಸಾಂ | 5,851 |
| 15 | ಒಡಿಶಾ | 5,351 |












Click it and Unblock the Notifications