Covid19 Bulletin: 24 ಗಂಟೆಯಲ್ಲಿ 52,050 ಜನರಿಗೆ ಸೋಂಕು, 803 ಸಾವು

ದೆಹಲಿ, ಆಗಸ್ಟ್ 04: ದೇಶದಲ್ಲಿ ಹೊಸದಾಗಿ 52,050 ಜನರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 52,050 ಹೊಸ ಕೇಸ್ ಪತ್ತೆಯಾಗಿದೆ ಹಾಗೂ 803 ಜನರು ಮೃತಪಟ್ಟಿದ್ದಾರೆ.

Recommended Video

      Siddaramaiah Covid : ಮಾಜಿ ಹಾಗು ಹಾಲಿ ಮುಖ್ಯಮಂತ್ರಿಗಳು ಒಂದೇ ಆಸ್ಪತ್ರೆಯಲ್ಲಿ | Oneindia Kannada

      ಇಂದಿನ ವರದಿ ಬಳಿಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,55,746ಕ್ಕೆ ತಲುಪಿದೆ. ಅದರಲ್ಲಿ 12,30,510 ಜನರು ಸೋಂಕಿನಿಂದ ಚಿಕಿತ್ಸೆ ಪಡೆದುಕೊಂಡಿದ್ದರೆ, 5,86,298 ಮಂದಿ ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಹೊಸದಾಗಿ 803 ಜನರು ಕೊರೊನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 38938ಕ್ಕೆ ಏರಿಕೆಯಾಗಿದೆ.

      ಇನ್ನು ಆಗಸ್ಟ್ 3 ರಂದು 6,61,182 ಜನರ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಕೊವಿಡ್ ಪರೀಕ್ಷೆಗಳ ಸಂಖ್ಯೆ 2,08,64,750 ತಲುಪಿದೆ.

      India Reported 52,050 New Coronavirus Cases And 803 Deaths In Last 24 Hours

      ನಿನ್ನೆ ಯಾವ ರಾಜ್ಯದಲ್ಲಿ ಎಷ್ಟು ಕೇಸ್ ಪತ್ತೆಯಾಗಿದೆ:

      ಮಹಾರಾಷ್ಟ್ರದಲ್ಲಿ ನಿನ್ನೆ 8968 ಕೇಸ್ ಪತ್ತೆಯಾಗಿದೆ. ತಮಿಳುನಾಡಿನಲ್ಲಿ 5609 ಕೇಸ್, ಆಂಧ್ರಪ್ರದೇಶದಲ್ಲಿ 7822 ಪ್ರಕರಣ, ದೆಹಲಿಯಲ್ಲಿ 805 ಕೇಸ್ ಹಾಗೂ ಕರ್ನಾಟಕದಲ್ಲಿ 4752 ಕೇಸ್ ದಾಖಲಾಗಿದೆ.

      ಪಶ್ಚಿಮ ಬಂಗಾಳದಲ್ಲಿ 2716 ಕೇಸ್, ಉತ್ತರ ಪ್ರದೇಶದಲ್ಲಿ 4441 ಕೇಸ್, ಗುಜರಾತ್‌ನಲ್ಲಿ 1009 ಕೇಸ್, ತೆಲಂಗಾಣದಲ್ಲಿ 983 ಕೇಸ್ ವರದಿಯಾಗಿದೆ. ಬಿಹಾರದಲ್ಲಿ 2297 ಕೇಸ್, ಅಸ್ಸಾಂನಲ್ಲಿ 2371 ಕೇಸ್, ರಾಜಸ್ಥಾನದಲ್ಲಿ 1145 ಕೇಸ್ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+